ಚೆನ್ನೈ: ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಭಾರಿ ಬೇಡಿಕೆ ನಿರ್ವಿುಸಿಕೊಳ್ಳುತ್ತಿರುವ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಈಗ ಇನ್ನೊಂದು ಬಹುನಿರೀಕ್ಷಿತ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ನಿರ್ದೇಶಕ ಕೃಷ್ಣ ವಂಶಿ ಅವರ ಮೆಗಾ ಬಜೆಟ್ ಚಿತ್ರ ‘ರುದ್ರಾಕ್ಷ’ದಲ್ಲಿ ನಟಿಸಲು ಕಡೆಗೂ ಓಕೆ ಎಂದಿದ್ದಾರಂತೆ!
ಹೌದು, ಸಣ್ಣ-ಪುಟ್ಟ ವಿವಾದವೂ ಸೇರಿದಂತೆ ನಾನಾ ರೀತಿಯಿಂದ ಸುದ್ದಿಯಾಗಿದ್ದ ‘ರುದ್ರಾಕ್ಷ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುವುದು ಅಧಿಕೃತಗೊಂಡಿದೆ ಎಂದೇ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಅನುಷ್ಕಾ ಸ್ಕ್ರಿಪ್ಟ್ ಓದಿದ ನಂತರ ಪ್ರೇರೇಪಿತರಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಆದರೆ… ಇವೆಲ್ಲದರ ನಡುವೆಯೂ ಅಭಿಮಾನಿಗಳಲ್ಲೊಂದು ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆಗೂ ಮೀರಿದ ಸದ್ದು ಮಾಡಿ, ಚಿತ್ರರಸಿಕರ ಕುತೂಹಲ ಹೆಚ್ಚಿಸಿರುವ ‘ಬಾಹುಬಲಿ 2’ ಚಿತ್ರದ ಶೂಟಿಂಗ್ನಲ್ಲಿ ಅನುಷ್ಕಾ ಬಿಜಿಯಾಗಿದ್ದಾರೆ. ಅದು ಮುಗಿಯದೇ ಹೇಗೆ ‘ರುದ್ರಾಕ್ಷ’ ಶೂಟಿಂಗ್ ಆರಂಭಿಸುತ್ತಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಹಾಗಾಗಿ, ಅನುಷ್ಕಾ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಬಾಹುಬಲಿ-2 ಶೂಟಿಂಗ್ ಎಂದು ಕೊನೆಗೊಳ್ಳಲಿದೆ ಎನ್ನುವ ಸ್ಪಷ್ಟ ಚಿತ್ರಣವಿಲ್ಲದೆ, ಮತ್ತೊಂದು ಸಿನಿಮಾ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಬಲ್ಲವರು ಮಾತು.
ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಎಂದರೆ, ಐದು ಮಂದಿ ಹೀರೋಗಳು ಮತ್ತು ಇಬ್ಬರು ಹೀರೋಯಿನ್ಗಳೇ ಈ ಚಿತ್ರದ ಪ್ರಮುಖ ಆಕರ್ಷಣೆ. ಹಾಗಾಗಿ, ನಿರ್ವಪಕ ದಿಲ್ ರಾಜು ಅವರು ಅನುಷ್ಕಾ ಶೆಟ್ಟಿ ಇದ್ದರೇನೆ ಚಿತ್ರಕ್ಕೊಂದು ಮೆರಗು ಅಂತ ಪಟ್ಟುಹಿಡಿದಿದ್ದಾರಂತೆ. ಒಂದುವೇಳೆ ಅನುಷ್ಕಾ ಒಪ್ಪಿಕೊಂಡಿರುವುದು ನಿಜವೇ ಆಗಿದ್ದರೆ, ಇನ್ನೊಂದು ವರ್ಷ ಅವರು ಸಖತ್ ಬಿಜಿ ನಟಿ ಎನಿಸಿಕೊಳ್ಳುವುದು ಗ್ಯಾರಂಟಿ.