ಮನೋರಂಜನೆ

ಮೊದಲ ದಿನ 6 ಕೋಟಿ, ಮಾಸ್ಟರ್ ಪೀಸ್ ದಾಖಲೆ: ರನ್ ದಾಖಲೆ ಮುರಿದ ಯಶ್

Pinterest LinkedIn Tumblr

Yash-gets-readyಯಶ್‌ ಮುಂದಿನ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. “ರಾಧಿಕಾ ಮತ್ತು ಯಶ್‌ ಜೊತೆಯಾಗಿ ನಟಿಸಲಿರುವ ಅದೊಂದು ಸುಂದರ ಪ್ರೇಮಕತೆಯುಳ್ಳ ಸಿನಿಮಾ ಆಗಲಿದೆ. ಮಹೇಶ್‌ರಾವ್‌ ನಿರ್ದೇಶನದ ಆ ಚಿತ್ರವನ್ನು ಮಂಜು ನಿರ್ಮಾಣ ಮಾಡಲಿದ್ದಾರೆ. ಜನವರಿ 15ರ ಹೊತ್ತಿಗೆ ಮುಹೂರ್ತ ಆದರೂ ಆಗಬಹುದು.

ಆದರೆ, ಮಾಸ್ಟರ್‌ಪೀಸ್‌ ಚಿತ್ರಕ್ಕಾಗಿ ಬಿಡುವಿಲ್ಲದೆ ಕೆಲಸ ಮಾಡಿದ್ದರಿಂದ, ಒಂಚೂರು ವಿಶ್ರಾಂತಿಯ ಅಗತ್ಯವೂ ಇದೆ. ಜನವರಿ ಮೂರನೇ ವಾರದಲ್ಲಂತೂ ಚಿತ್ರ ಸೆಟ್ಟೇರಲಿದೆ’ ಅನ್ನುತ್ತಾರೆ ಯಶ್‌. ಈ ಮಧ್ಯೆ ಮಾಸ್ಟರ್‌ಪೀಸ್‌, ಕನ್ನಡ ಚಿತ್ರರಂಗದ ದಾಖಲೆಗಳನ್ನೆಲ್ಲ ಮುರಿದು ಮುನ್ನುಗ್ಗುತ್ತಿದೆ. “ಮುಂದಿನ ವಾರ ಮತ್ತೂಂದಷ್ಟು ಚಿತ್ರಮಂದಿರಗಳನ್ನು ಸೇರಿಸಿಕೊಳ್ಳುತ್ತಿದ್ದೇವೆ. ಹಲವಾರು ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ. ಎಲ್ಲೆಲ್ಲಿ ಬಿಡುಗಡೆ ಆಗಿದೆಯೋ ಅಲ್ಲೆಲ್ಲ ಮಾಸ್ಟರ್‌ಪೀಸ್‌ ದಾಖಲೆ ಮಾಡಿದೆ. ಕರ್ನಾಟಕದ ಹೊರಗೇ ಸುಮಾರು 50 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದೆ. ಅಲ್ಲೆಲ್ಲವೂ ಚೆನ್ನಾಗಿಯೇ ಗಳಿಕೆ ಕಾಣುತ್ತಿದೆ.

ಅತೀ ಹೆಚ್ಚಿನ ಗಳಿಕೆಯ ಜೊತೆಗೆ ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸವನ್ನೂ ಮಾಸ್ಟರ್‌ಪೀಸ್‌ ಮಾಡಿದೆ ‘ ಅಂತಾರೆ ಹಂಚಿಕೆದಾರ ಜಯಣ್ಣ. ಜಯಣ್ಣ ಪ್ರಕಾರ “ಚಿತ್ರದ ಮೊದಲ ದಿನದ ಗಳಿಗೆ 6 ಕೋಟಿ. ಇದು ಕನ್ನಡ ಚಿತ್ರರಂಗದಲ್ಲೇ ದಾಖಲೆ. ಒಂದು ವಾರದ ಗಳಿಗೆ 20 ಕೋಟಿ
ದಾಟಲಿದೆ. ಅದೂ ಕೂಡ ದಾಖಲೆಯೇ. ಯಶ್‌ ಅಭಿನಯದ ಮಿಮಿರಾಮಾಚಾರಿ ಒರೈಯಾನ್‌ ಮಾಲ್‌ನಲ್ಲಿ ಒಂದು ವಾರಕ್ಕೆ 40 ಲಕ್ಷ ಗಳಿಸಿತ್ತು.

ಮಾಸ್ಟರ್‌ಪೀಸ್‌ ಮೊದಲ ದಿನವೇ 20 ಲಕ್ಷ ಗಳಿಸಿದೆ. ಬಿಡುಗಡೆಯಾದ ಮುನ್ನೂರು ಪ್ಲಸ್‌ ಚಿತ್ರಮಂದಿರಗಳಲ್ಲಿ ಮೂರನೇ ದಿನಕ್ಕೂ ಅದೇ ಹಿಡಿತ ಇಟ್ಟುಕೊಂಡಿರುವ ಸಿನಿಮಾ ಇದು.’
-ಉದಯವಾಣಿ

Write A Comment