ಮನೋರಂಜನೆ

ಬಾಲಿವುಡ್ ಗೆ ಕನ್ನಡತಿ ಹರ್ಷಿಕಾ ಪೂಣಚ್ಚ ಲಗ್ಗೆ

Pinterest LinkedIn Tumblr

Harshika-Poonacha

ನಮ್ಮ ಮನೆಯಂಗಳದ ಹೂವೊಂದು… ಈಗ ಬಾಲಿವುಡ್‌ಗೆ ಲಗ್ಗೆ ಇಟ್ಟಿದೆ. ಈಗಾಗಲೇ ದಕ್ಷಿಣದ ಎಷ್ಟೋ ನಟಿಯರು ಬಾಲಿವುಡ್‌ಗೆ ಹೋಗಿ ಅಲ್ಲಿ ದಕ್ಷಿಣದ ಬಾವುಟ ಹಾರಿಸಿದ್ದಾರೆ.

ಇದೀಗ ಅಪ್ಪಟ ಕನ್ನಡದ ಕಂದವೊಂದು ಬಾಲಿವುಡ್‌ಗೆ ಹೊರಟು ನಿಂತಿದೆ. ಕನ್ನಡ, ತೆಲುಗು, ಕೊಡವ, ಕೊಂಕಣಿ, ತುಳು ಭಾಷೆಯ ಚಿತ್ರಗಳಲ್ಲಿ ನಟಿಸಿ ಬೋಲ್ಡ್ ಆಂಡ್ ಬ್ಯೂಟಿ ಎಂಬ ಖ್ಯಾತಿ ಪಡೆದಿರುವ ಹರ್ಷಿಕಾ ಪೂಣಚ್ಚ ಅಪ್ಪಟ ಕನ್ನಡದ ಕೂಸು. ತಮಸ್ಸು ಚಿತ್ರದ ನಟನೆಗಾಗಿ ಕರ್ನಾಟಕ ಫಿಲ್ಮ್ ಫೇರ್ ಪ್ರಶಸ್ತಿಗೂ ಭಾಜನರಾಗಿರುವ ಹರ್ಷಿಕಾ ಕನ್ನಡದಲ್ಲಿ ಮನೆ ಮಾತಾದವಳು.   ಇಂಥಾ ಹರ್ಷಿಕಾ ಎಂಬ 25ರ ಹರೆಯದ ಹುಡುಗಿ ಭಾರತೀಯ ಚಿತ್ರೋದ್ಯಮದ ಸಮುದ್ರ ಹಿಂದಿ ಚಿತ್ರರಂಗಕ್ಕೆ ದಾಪುಗಾಲು ಹಾಕಿದ್ದು,

ಅವಳ ಈ ಬಾಲಿವುಡ್ ಪಯಣ ಯಶಸ್ವಿಯಾಗಲಿ… ಇಲ್ಲಿ ಒಳ್ಳೆಯ ಅಭಿನೇತ್ರಿ ಎಂದು ಹೆಸರಾಗಿರುವ ಹರ್ಷಿಕಾ ಬಿಟೌನ್‌ನಲ್ಲೂ ಮಿಂಚಲಿ. ನಮ್ಮ ಮನೆಯಂಗಳದಿ ಬೆಳೆದೊಂದು ಹೂವು ಉತ್ತರದಲ್ಲಿ ಘಮಘಮಿಸಲಿ.

Write A Comment