ಮನೋರಂಜನೆ

ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಪಡೆಯುತ್ತಿರು ಕೋಟಿ ಎಷ್ಟು ಗೊತ್ತೇ…?

Pinterest LinkedIn Tumblr

Kohli

ನವದೆಹಲಿ: ಪ್ರತಿಷ್ಠಿತ ಇಂಡಿಯನ್ ಸೂಪರ್ ಲೀಗ್ ಆಟಗಾರರ ಸಂಭಾವನೆ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಚ್ಚು ವೇತನ ಪಡೆಯುತ್ತಿರುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಬಿಸಿಸಿಐ ನಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಶುಕ್ರವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 2010 ರಲ್ಲಿ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ವ್ಯವಸ್ಥೆ ನಿರ್ಮಿಸಿದ ನಂತರ ಮೊದಲ ಬಾರಿಗೆ ಉಳಿಕೆ ಆಟಗಾರರ ನಿಜವಾದ ಮೊತ್ತವನ್ನು ಪ್ರಕಟಿಸಲಾಗಿದೆ.

ವಿರಾಟ್ ಕೊಹ್ಲಿ ರು. 15 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಇನ್ನು ಆರ್ ಸಿಬಿ ತಂಡದ ಆಟಗಾರರ ಆಯ್ಕೆಯ ಮೊತ್ತದಲ್ಲಿ ರು. 12.5 ಕೋಟಿ ಕಡಿಮೆ ಮಾಡಲಾಗಿದೆ. ಉಳಿದ ಭಾರತೀಯ ಆಟಗಾರರ ಪೈಕಿ ಹರ್ಭಜನ್ ಸಿಂಗ್ ರು.5.50 ಕೋಟಿಯಿಂದ 8 ಕೋಟಿಗೆ ಅಂಬಟಿ ರಾಯುಡು, ತಮ್ಮ ವೇತನದಲ್ಲಿ ಬಡ್ತಿ ಪಡೆದಿದ್ದಾರೆ.

Write A Comment