ಮನೋರಂಜನೆ

‘ರೋಬೋಟ್’ನಲ್ಲಿ ಖಳನಾಯಕರಾಗದಿರಲು ಸೂಚಿಸಿದ್ದು ರಜನಿ: ಅಮಿತಾಬ್ ಬಚ್ಚನ್

Pinterest LinkedIn Tumblr

amitab-rajini

ಮುಂಬೈ: ತಮಿಳು ಬ್ಲಾಕ್ ಬಸ್ಟರ್ ಸಿನೆಮಾ ‘ರೋಬೋಟ್ ‘ ನಲ್ಲಿ ನಟಿಸದಂತೆ ಸೂಚಿಸಿದವರು ತಮ್ಮ ಆಪ್ತ ಗೆಳೆಯ ಸೂಪರ್ ಸ್ಟಾರ್ ರಜನಿಕಾಂತ್ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಎಸ್ ಶಂಕರ್ ನಿರ್ದೇಶನದ ‘ರೋಬೋಟ್’ ೨೦೧೦ರಲ್ಲಿ ಬಿಡುಗಡೆ ಕಂಡಿತ್ತು. ಇದರಲ್ಲಿ ರಜನಿಕಾಂತ್ ಮತ್ತು ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿದ್ದರು.

“ನಾನು ಖಳನಾಯಕನ ಪಾತ್ರ ವಹಿಸಬೇಕೆಂದು ಶಂಕರ್ ಕೇಳಿದ್ದರು. ನಾನು ರಜನಿ ಅವರಿಗೆ ಕರೆ ಮಾಡಿದ್ದಾಗ, ಅವರು ಹೇಳಿದ್ದೇನೆಂದರೆ ನಿಮ್ಮನ್ನು ಖಳನಾಯಕರಾಗಿ ಒಪ್ಪಲು ಜನರಿಗೆ ಕಷ್ಟ ಆದುದರಿಂದ ಮಾಡಬೇಡಿ ಎಂದರು. ನಾನು ಸರಿ ಎಂದೆ” ಎಂದು ಬಚ್ಚನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ರೋಬೋಟ್-೨ ಕ್ಕೆ ಕೂಡ ಅಮಿತಾಬ್ ಬಚ್ಚನ್ ಅವರಿಗೆ ಪಾತ್ರ ನೀಡಲಾಗಿದೆ ಎಂಬ ವದಂತಿಗಳನ್ನು ನಟ ತಳ್ಳಿ ಹಾಕಿದ್ದಾರೆ. ೭೩ ವರ್ಷದ ನಟ ಸದ್ಯಕ್ಕೆ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ‘ವಾಜಿರ್’, ‘ಟೀನ್’, ಮತ್ತು ‘ಆಂಖೆ-೨’ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Write A Comment