ಬಿಗ್ಬಾಸ್ ಶೋನಲ್ಲಿ ವಿಕ್ರಮ ಬೇತಾಳನ ಟಾಸ್ಕ್ ಮೂಲಕ ಮನೆ ಸದಸ್ಯರ ಮನಸ್ಸಿನೊಳಗಿರುವ ಭಾವನೆಗಳನ್ನು ಬಡಿದೆಬ್ಬಿಸುತ್ತಾ, ಪ್ರಶ್ನೆ-ಉತ್ತರಗಳನ್ನು ಅವರಿಂದಲೇ ಕೊಡಿಸೋ ಕೆಲ್ಸಾ ಮಾಡುತ್ತಿದ್ದಾರೆ.
ನಿನ್ನೆಯ ಎಪಿಸೋಡ್ನಲ್ಲಿ ಬೇತಾಳನ ಹೊತ್ತಿದ್ದ ಚಂದನ್ಗೆ ಸೆಲ್ಫ್ ರೆಸ್ಪೆಕ್ಟ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ನಿಮ್ಮ ಸೆಲ್ಫ್ ರೆಸ್ಪೆಕ್ಟ್ ಬಗ್ಗೆ ಕಾಳಜಿ ತೋರಿಸೋ ನೀವು ಬೇರೆಯವರ ಸೆಲ್ಫ್ ರೆಸ್ಪೆಕ್ಟ್ ಬಗ್ಗೆ ಯಾಕೆ ಚಿಂತಿಸಲ್ಲ ಎಂದು ಪ್ರಶ್ನೆ ಬಂದಿತ್ತು.
ಇದಕ್ಕೆ ಉತ್ತರಿಸಿದ ಚಂದನ್ ನಾನು ಬೇರೆಯವರ ಸೆಲ್ಫ್ ರೆಸ್ಪೆಕ್ಟ್ ಬಗ್ಗೆನೂ ಯೋಚಿಸುತ್ತೇನೆ ಅಂತಾ ಹೇಳಿದ್ರು. ಈ ಉತ್ತರಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಗೌತಮಿ, ಇಲ್ಲ ನನ್ನ ವಿಚಾರದಲ್ಲಿ ನೀವು ತುಂಬಾ ಮಾತಾಡಿದ್ದೀರಿ… ಸುದೀಪ್ ಜೊತೆ ಮಾತಾಡಬೇಕಾದ್ರೆ ನನ್ನ ಬಗ್ಗೆ 2ನೇ ವಿಕೇಟ್, 2ನೇ ನಂಬರ್ ಅಂತೆಲ್ಲಾ ಹೇಳ್ತೀರಲ್ಲ. ಇದರಿಂದ ನಮ್ಮ ಬಗ್ಗೆ ಸಮಾಜದಲ್ಲಿ ಏನು ಅಂದುಕೊಳ್ಳಬಹುದು. ನೀವು ತಮಾಷೆ ಮಾಡಿರಬಹುದು. ಅದ್ರೆ ಅದೇ ನಿಮ್ಮ ಬಗ್ಗೆ ತಮಾಷೆ ಮಾಡಿದ್ರೆ ನೀವು ಇಷ್ಟಪಡಲ್ಲ ಯಾಕೆ ಎಂದು ಗೌತಮಿ ಪ್ರಶ್ನಿಸಿದ್ರು.
ಈ ವೇಳೆ ಕೂಡಲೇ ತಮ್ಮ ತಪ್ಪಿನ ಅರಿವಾದಂತೆ ಕಂಡ ಚಂದನ್, ಇದುವರೆಗೂ ಯಾವುದೇ ಶೋನಲ್ಲಿ ಮಹಿಳೆಯರ ಘನತೆಗೆ ಧಕ್ಕೆಯಾಗುವಂತೆ ನಾನು ಮಾತಾಡಿರಲಿಲ್ಲ. ಇನ್ನುಮುಂದೆ ಮಾತಾಡೋದೂ ಇಲ್ಲ. ಒಂದು ವೇಳೆ ನಿನಗೆ ಹರ್ಟ್ ಆಗಿದ್ದರೆ ಸಾರಿ ಎಂದು ಕ್ಷಮೆಯಾಚಿಸಿದರು.