ಮನೋರಂಜನೆ

ತೃತೀಯ ಲಿಂಗಿಗಳ ಜೊತೆ ಸೋನು ನಿಗಮ್.. ವಿಡಿಯೋ ಸಾಂಗ್ ಸೂಪರ್‌!

Pinterest LinkedIn Tumblr

3tru

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿಗಳದ್ದೇ ಆದ ಒಂದು ಮ್ಯೂಸಿಕ್ ಟ್ರೂಪ್ ಅಸ್ತಿತ್ವಕ್ಕೆ ಬಂದಿದೆ. ವೈ ಫಿಲ್ಮ್ಸ್‌ ಸಂಸ್ಥೆ 6 ಪ್ಯಾಕ್ ಬ್ಯಾಂಡ್ ಹೆಸರಿನಲ್ಲಿ ಈ ಟ್ರೂಪ್ ಆರಂಭಿಸಿದೆ. ಬಾಲಿವುಡ್ ಸಿಂಗರ್ ಸೋನು ನಿಗಮ್ ಈ ಟ್ರೂಪ್‌ನ್ನು ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಸೋನು ನಿಗಮ್‌, ಸಮಾಜದಲ್ಲಿ ತೃತೀಯ ಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು. ಸಮಾಜ ಅವರನ್ನೂ ಮನುಷ್ಯರಂತೆ ಗುರುತಿಸಬೇಕು ಎಂದು ಮನವಿ ಮಾಡಿದರು. ತೃತೀಯ ಲಿಂಗಿಗಳ ತಂಡ ಉದ್ಘಾಟಿಸುವ, ಅವರೊಂದಿಗೆ ಹಾಡುವ ಅವಕಾಶ ತಮಗೆ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ತಂಡದಲ್ಲಿ 6 ತೃತೀಯ ಲಿಂಗಿ ಸದಸ್ಯರಿದ್ದು, 6 ಪ್ಯಾಕ್ ಈ ಬ್ಯಾಂಡ್‌ನ ಮೊದಲ ವಿಡಿಯೋ ಸಾಂಗ್‌ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ.

Write A Comment