ಮನೋರಂಜನೆ

‘ಸುಲ್ತಾನ್’ ರೆಸ್ಲಿಂಗ್ ಡ್ರಾಮಾಕ್ಕೆ ಬಾಂಬೆ ‘ವೆಲ್ವೆಟ್ ತಾರೆ’

Pinterest LinkedIn Tumblr

Anushka-webಮುಂಬೈ: ತನ್ನ ’ಅದ್ಭುತ ಸೃಷ್ಟಿ’ಯಾಗಿರುವ ಅನುಷ್ಕಾ ಶರ್ಮಾ ಅವರು ಸಂಸ್ಥೆಯ ಮುಂಬರುವ ’ಸುಲ್ತಾನ್’ ಚಿತ್ರದಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ರೊಮಾನ್ಸ್ ಮಾಡಲಿದ್ದಾರೆ ಎಂದು ಯಶ್ ರಾಜ್ ಫಿಲ್ಮ್ಸ್ ದೃಢಪಡಿಸಿದೆ. ಇದರೊಂದಿಗೆ ಈ ಕುರಿತು ಎದ್ದಿದ್ದ ಅನುಮಾನಗಳಿಗೆ ತೆರೆ ಎಳೆದಿದೆ.

ಚಿತ್ರದ ಬಗ್ಗೆ ಪ್ರಕಟಣೆ ಹಾಗೂ ಕಂಗನಾ ರಣಾವತ್, ದೀಪಿಕಾ ಪಡುಕೋಣೆ, ಕೃತಿ ಸನೋನ್ ಮತ್ತು ಪರಿಣೀತಿ ಛೋಪ್ರಾ ಮತ್ತಿತರ ನಟಿಯರ ಹೆಸರುಗಳನ್ನು ಪ್ರಮುಖ ಪಾತ್ರಕ್ಕಾಗಿ ಪರಿಶೀಲಿಸುತ್ತಿರುವುದಾಗಿ ಪ್ರಕಟಿಸಿದ ಒಂದು ವರ್ಷದ ಬಳಿಕ ಈ ಸುದ್ದಿ ಹೊರ ಬಿದ್ದಿದೆ.

ಅನುಷ್ಕಾ ಶರ್ಮಾ ಅವರು ಚಿತ್ರದಲ್ಲಿ ಪಾಲ್ಗೊಳ್ಳುವ ಬಗ್ಗೆ ಕೆಲ ತಿಂಗಳುಗಳ ಹಿಂದೆಯೇ ಪುಕಾರುಗಳು ಎದ್ದಿದ್ದವು. ಆದರೆ ಆಕೆ ಅದನ್ನು ಅಲ್ಲಗಳೆದಿದ್ದರು. ಚಿತ್ರಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂದು ಅನುಷ್ಕಾ ಸ್ಪಷ್ಟ ಪಡಿಸಿದ್ದರು.

ಈಗ ಯಶ್ ರಾಜ್ ಫಿಲ್ಮ್ಸ್ನ ವಸ್ತ್ರವಿನ್ಯಾಸ ನಿರ್ದೇಶಕ ಶಾನೂ ಶರ್ಮಾ ಅವರು ‘ರೆಸ್ಲಿಂಗ್ ಡ್ರಾಮಾಕ್ಕೆ ಬಾಂಬೆ ವೆಲ್ವೆಟ್ ತಾರೆ’ಯನ್ನು ಸೆಳೆಯಲಾಗಿದೆ’ ಎಂದು ಟ್ವಿಟ್ಟರ್​ನಲ್ಲಿ ಪ್ರಕಟಿಸಿದ್ದಾರೆ. ‘ಸುಲ್ತಾನ್’ ತಂಡಕ್ಕೆ ಅನುಷ್ಕಾ ಶರ್ಮಾ ಅವರಿಗೆ ಸ್ವಾಗತವನ್ನೂ ಕೋರಿದ್ದಾರೆ. ಟ್ವಿಟ್ಟರ್ ಪೋಸ್ಟ್ ಜೊತೆಗೆ ಸಲ್ಮಾನ್ ಖಾನ್ (50) ಅವರನ್ನು 27ರ ಹರೆಯದ ಅನುಷ್ಕಾ (27) ತಬ್ಬಿಕೊಂಡಿರುವ ಚಿತ್ರವನ್ನೂ ಹಾಕಿದ್ದಾರೆ.

ಅನುಷ್ಕಾ ಶರ್ಮಾ ಅವರೂ ’ಸುಲ್ತಾನ್’ ಶೀರ್ಷಿಕೆಯಡಿ ಇದೇ ವಿಷಯವನ್ನು ಇದೇ ಚಿತ್ರದ ಜೊತೆಗೇ ಪ್ರಕಟಿಸಿದ್ದಾರೆ.

Write A Comment