ಮನೋರಂಜನೆ

ಅಜ್ಜಿ-ಮಗಳು-ಮೊಮ್ಮಗಳು, ಒಬ್ಬರಿಗಿಂತ ಒಬ್ಬರು..ಬಿಚ್ಚೋದರಲ್ಲಿ ಸಿದ್ಧಹಸ್ತರು!

Pinterest LinkedIn Tumblr

2bijjuಪ್ರೊತಿಮಾ ಬೇಡಿ, ಪೂಜಾ ಬೇಡಿ, ಆಲಿಯಾ ಇಬ್ರಾಹಿಂ….ತಾಯಿ, ಮಗಳು, ಮೊಮ್ಮಗಳು…ಮೂವರು ಗ್ಲಾಮರಸ್‌‌..ಬೋಲ್ಡ್ ಅಂಡ್ ಬ್ಯೂಟಿಫುಲ್‌. ಪ್ರೊತಿಮಾ ಬೇಡಿ, ಪೂಜಾಬೇಡಿ ಬಗ್ಗೆ ಗೊತ್ತೇ ಇದೆ. ಈಗ ಏನು ಹೇಳೋದು ಅಂತೀರಾ? ಪೂಜಾ ಬೇಡಿ ಮಗಳು ಕೂಡಾ ಅಜ್ಜಿ, ಅಮ್ಮನಂತೆ ಬೋಲ್ಡ್‌ ಆಗಿ ಬಿಚ್ಚಾಟ ಶುರು ಮಾಡಿರುವುದರಿಂದ ವಂಶದ ತಳಿ ಬಗ್ಗೆ ಪ್ರಸ್ತಾಪಿಸಬೇಕಿದೆ.

ಇತ್ತೀಚೆಗೆ ಪೂಜಾ ಬೇಡಿ ಮಗಳು ಆಲಿಯಾ ಇಬ್ರಾಹಿಂ ಸಖತ್‌ ಹಾಟ್‌ ಹಾಟ್ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ನಂತರ ಕಮೆಂಟ್‌ ಮಾಡಿದವರನ್ನು ಜಾಲಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಹದಿಹರೆಯದ ಇನ್ನೂ ಒಂದು ಸಿನಿಮಾನೂ ಮಾಡದ ಈ ಆಲಿಯಾ ಇಬ್ರಾಹಿಂ ಸದಾ ಕ್ಲಬ್‌ ಪಬ್‌ಗಳಲ್ಲಿ ತಿರುಗಾಡುತ್ತಲೇ ಮಾಧ್ಯಮಗಳಲ್ಲಿ ಮಿಂಚುತ್ತಿದ್ದಾಳೆ. ಈಕೆಯ ಬಿಚ್ಚಾಟ ನೋಡಿದವರು ತಟ್ಟನೆ ಈಕೆಯ ಅಮ್ಮ, ಅಜ್ಜಿಯನ್ನು ನೆನಪಿಸಿಕೊಂಡು ‘ಬ್ಲಡ್‌…ಎಲ್ಲಿಗೋಗುತ್ತೆ’ ಅಂತಾ ಉದ್ಗರಿಸುತ್ತಿದ್ದಾರೆ.

ಈ ಹೊತ್ತಲ್ಲಿ ಆಲಿಯಾ ಇಬ್ರಾಹಿಂಳ ಅಜ್ಜಿ, ಅಮ್ಮನ ಬಗ್ಗೆ ಬ್ರೀಫ್ ಆಗಿ ನೆನೆಪಿಸಿಕೊಳ್ಳೋಣ.

ಪ್ರೊತಿಮಾ ಬೇಡಿ… ಕರ್ನಾಟಕದ ಜನಕ್ಕೆ ಪೂಜಾ ಬೇಡಿಗಿಂತ ಹೆಚ್ಚು ಗೊತ್ತು. ಯಾಕಂದ್ರೆ ಈ ಪ್ರೊತಿಮಾ ಬೇಡಿ ದಶಕಗಳ ಹಿಂದೆ ಬೆಂಗಳೂರಿನ ಸಮೀಪದ ಹೆಸರುಘಟ್ಟ ಬಳಿ ನೃತ್ಯಗ್ರಾಮ ಅಂತಾ ಕಟ್ಟಿಕೊಂಡಿದ್ದರು. ಸ್ವತಹ ನೃತ್ಯಗಾರ್ತಿಯಾದ ಪ್ರೊತಿಮಾ ಬೆಂಗಳೂರಿಗೆ ಬರುವ ಮುನ್ನ ಮಾಡೆಲ್‌ ಆಗಿದ್ದರು.

ಆ ಕಾಲದಲ್ಲೇ  ಮುಂಬೈನ ಜುಹು ಬೀಚ್‌ನಲ್ಲಿ ಪೂರ್ತಿ ಬೆತ್ತಲಾಗಿ ಓಡಿದ್ದಳು. ಪ್ರೊತಿಮಾ ಬಗ್ಗೆ ಇಷ್ಟೇ ಹೇಳಿದರೆ ತಪ್ಪಾಗುತ್ತೆ . ಆಕೆ ಪ್ರತಿಭಾವಂತೆಯೂ ಹೌದು. ಬಾಲಿವುಡ್ ನಟ ಕಬೀರ್ ಬೇಡಿಯನ್ನು ಮದುವೆಯಾಗಿ, ಅವರಿಂದ ಪೂಜಾಬೇಡಿಯನ್ನು ಪಡೆದ ಪ್ರೊತಿಮಾ ಹಿಮಾಲಯದಲ್ಲಿ ಪ್ರವಾಸಕ್ಕೆ ಹೋದಾಗ ಅಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಸಾವಿಗೀಡಾದ್ರು.

ಪೂಜಾ ಬೇಡಿ…ಪ್ರೊತಿಮಾ ಬೇಡಿಯ ಮಗಳು. ಈಕೆಯೂ ಸಹ ತನ್ನ ಅಮ್ಮನಂತೆ ಬಿಚ್ಚಮ್ಮಳೇ. ಗುಯೇಟಾ ಇಬ್ರಾಹಿಂ ಜೊತೆ ವಿವಾಹವಾದ ಪೂಜಾ ಬೇಡಿ ಈ ವಿಚ್ಛೇದಿತೆ. ಬಾಲಿವುಡ್‌ನಲ್ಲಿ ತನ್ನ ಮಾದಕ ಮೈಮಾಟದಿಂದ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಚೆಲುವೆ. ಈಕೆಯೂ ಪ್ರತಿಭಾವಂತೆ ಎಂಬುದರಲ್ಲಿ ಎರಡು ಮಾತಿಲ್ಲ.

90ರ ದಶಕದ ಈ ಬಾಲಿವುಡ್‌ನಲ್ಲಿ ‘ಜೋ ಜೀತಾ ವಹಿ ಸಿಕಂದರ್‌’, ‘ಲುಟೇರೇ ಹಾಗೂ ‘ಆತಂಕ ಹಿ ಆತಂಕ’ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಳು. ಈಕೆ ನಟಿಸಿದ ಎಲ್ಲ ಚಿತ್ರಗಳಲ್ಲೂ ಸಿಕ್ಕಿದ್ದು ಬೋಲ್ಡ್‌ ಪಾತ್ರಗಳೆ. ಇನ್ನೊಂದು ಸಂಗತಿ ಎಂದರೆ ಈಕೆ ಕಾಮಸೂತ್ರ ಕಾಂಡೋಮ್‌ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಎದೆ ಬಡಿತ ಹೆಚ್ಚಿಸಿದ್ದಾಕೆ.

ಆಲಿಯಾ ಇಬ್ರಾಹಿಂ….

ಪೂಜಾ ಬೇಡಿ ಮಗಳು. ಪ್ರೊತಿಮಾ ಬೇಡಿಯ ಮೊಮ್ಮಗಳು. ಆಲಿಯಾ ಇಬ್ರಾಹಿಂ ಈ ವಯಸ್ಸಿನಲೇ ಅಜ್ಜಿ ಅಮ್ಮನಿಗಿಂತ ಸ್ಪೀಡ್ ಆಗಿದ್ದಾಳೆ. ಕೆಲ ದಿನಗಳ ಹಿಂದೆ ಆಲಿಯಾ ತನ್ನ ಹಾಟ್ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸುದ್ದಿ ಮಾಡಿದ್ದರು. ಆದರೆ ಈ ಫೋಟೊಗಳನ್ನು ನೋಡಿದವರಲ್ಲಿ ಹೆಚ್ಚಿನವರು ಆಲಿಯಾಗೆ ನಕಾರಾತ್ಮಕ ಕಮೆಂಟ್ಸ್‌ಗಳನ್ನು ನೀಡಿದ್ದರು. ಅವಳ ತೆರೆದ ಎದೆ ನೋಡಿದವರು ಇದೊಂದು ವಯಸ್ಕರ ಚಿತ್ರದಲ್ಲಿನ ಫೋಟೊದಂತಿದೆ ಎಂತೆಲ್ಲ ಹೇಳಿ ಆಲಿಯಾ ಕಾಲೆಳೆದಿದ್ದರು.

ಈ ರೀತಿಯ ಕಮೆಂಟ್ಸ್‌ಗಳನ್ನು ನೋಡಿ ಸಿಟ್ಟಾಗಿದ್ದ ಆಲಿಯಾ ನಕಾರಾತ್ಮಕ ಕಮೆಂಟ್ಸ್ ನೀಡಿದವರಿಗೆ ಪ್ರತ್ಯುತ್ತರವನ್ನೂ ನೀಡಿದ್ದಳು. ನಾನು ನನ್ನ ಸ್ತನಗಳಿಂತ ದೊಡ್ಡವಳಿದ್ದೇನೆ ಎಂದು ಹೇಳಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಳು.

Write A Comment