ಮನೋರಂಜನೆ

ಅನಾಮಿಕ ಕರೆ.. ಪತ್ನಿ ಕೈಗೆ ಫೋನ್‌ ಕೊಟ್ರು ಬೆಳವಾಡಿ.. 90 ಸಾವಿರ ನಾಮ ಬಿತ್ತು!

Pinterest LinkedIn Tumblr

3belavadiಬೆಂಗಳೂರು: ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಎಟಿಎಂ ಪಾಸ್‌ವರ್ಡ್‌ಅನ್ನು ಬ್ಯಾಂಕ್ ಸಿಬ್ಬಂದಿ ನೆಪದಲ್ಲಿ ಪಡೆದು 90 ಸಾವಿರ ಡ್ರಾ ಮಾಡಿ ವಂಚಿಸಲಾಗಿದೆ.

ಪ್ರಕಾಶ್ ಬೆಳವಾಡಿ ಮನೆಯಲ್ಲಿದ್ದ ವೇಳೆ ಅವರ ಮನೆಗೆ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಅವರ ಫೋನ್‌ಗೆ ಕರೆ ಮಾಡಿದ್ದಾನೆ. ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಪ್ರಕಾಶ್‌ ಬೆಳವಾಡಿ ಪತ್ನಿಗೆ ಫೋನ್ ನೀಡಿದ್ದಾರೆ. ಈ ವೇಳೆ ಫೋನ್ ಮಾಡಿದಾತ ಪ್ರಕಾಶ್ ಬೆಳವಾಡಿ ಅವರ ಅಕೌಂಟ್‌ನ ಎಟಿಎಂ ಪಿನ್ ಕೇಳಿದ್ದಾನೆ.

ಇದರ ಅರಿವಿಲ್ಲದೆ ಅವರ ಪತ್ನಿ ಪಿನ್ ನಂಬರ್ ಹೇಳಿದ್ದಾರೆ. ನಂಬರ್ ಪಡೆದ ವಂಚಕ ಪ್ರಕಾಶ್ ಬೆಳವಾಡಿ ಅಕೌಂಟ್‌ನಿಂದ 90 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಕಾಶ್ ಬೆಳವಾಡಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೋನ್ ನಂಬರ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment