ಬಿಗ್‌ಬಾಸ್ ಸುಪರ್ ಸಂಡೆ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಅತಿಥಿಯಾಗಿ ಬಂದಿದ್ದರು. ಈ ವೇಳೆ ಕಿಚ್ಚ ಸುದೀಪ್ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ್ರು.
ಮೊದಲಿಗೆ ಸುದೀಪ್ ಕೇಳಿದ ಪ್ರಶ್ನೆ.. ನಿಮ್ಮನ್ನ ಉಪೇಂದ್ರ ಅವರು ಜಾಸ್ತಿ ಇಷ್ಟ ಪಡ್ತಾರಾ ಅಥವಾ ನೀವು ಅವರನ್ನು ಜಾಸ್ತಿ ಇಷ್ಟ ಪಡ್ತೀರಾ ಅಂತಾ ಕೇಳಿದ್ರು. ಆಗ ನಾನೇ ಅವರನ್ನು ಜಾಸ್ತಿ ಇಷ್ಟ ಪಡುವುದಾಗಿ ಪ್ರಿಯಾಂಕ ಹೇಳಿದ್ರು.
ಮುಂದುವರೆದು ಪ್ರಿಯಾಂಕ ಸಿನಿಮಾ ಬಗ್ಗೆ ಕೇಳುತ್ತಾ.. ಮದುವೆಯಾದ ಮೇಲೆ ನಿಮ್ಮನ್ನ ಇಷ್ಟಪಟ್ಟು ಯಾರಾದ್ರು ಮೆಸೇಜ್ ಮಾಡ್ತಾರ ಅಂತಾ ಕೇಳಿದ್ರು ಸುದೀಪ್.. ಅದಕ್ಕೆ ಹೌದು ಎಂದ ಪ್ರಿಯಾಂಕ, ಈಗೆಲ್ಲಾ ಸೊಷಿಯಲ್ ಮಿಡಿಯಾ ಹೇಗೆ ಅಂತಾ ನಿಮಗೆ ಗೊತ್ತು. ಆ ಥರದ ಮೆಸೇಜ್‌ಗಳು ಬರುತ್ತವೆ. ಆದ್ರೆ ಅದಕ್ಕೆಲ್ಲ ಜಾಸ್ತಿ ತಲೆಕೆಡಿಸಿಕೊಳ್ಳಲ್ಲ ಅಂತಂದ್ರು.
ಮಾತು ಮುಂದುವರೆದು ಉಪೇಂದ್ರ ಅವರನ್ನು ನಾನು ಮದುವೆ ಆಗ್ತೀನಿ ಅಂತಾ ಅಂದುಕೊಂಡಿರಲಿಲ್ಲ ಅಂದ ಪ್ರಿಯಾಂಕ, ಅವರನ್ನು ಮದುವೆ ಆಗಿದ್ದಕ್ಕೆ ನಿಜಕ್ಕೂ ನನಗೆ ಹೆಮ್ಮೆ ಇದೆ ಅಂತಾ ತಮ್ಮ ಮನದಾಳದ ಮಾತನ್ನು ಹೇಳಿಕೊಂಡ್ರು. ಅವರಿಂದಲೇ ನಾನು ಇಂದು ಈ ಮಟ್ಟದಲ್ಲಿ ಇದ್ದೇನೆ. ಅವರನ್ನು ಪಡೆದಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದು ಹೇಳಿದ್ರು ಪ್ರಿಯಾಂಕ. ಇದೇ ವೇಳೆ ಸಂಸಾರ, ಕೆಲಸ ಇತ್ಯಾದಿಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಂಡರು.