ಮನೋರಂಜನೆ

ಕ್ರೀಡಾ ತರಬೇತಿಗಾಗಿ ಕಿಡ್ನಿಯನ್ನೇ ಮಾರಲು ಮುಂದಾದ ಸ್ಕ್ವ್ಯಾಷ್ ತಾರೆ!

Pinterest LinkedIn Tumblr

1-Ravi-Dixit-WEBಧಾಮ್ ಪುರ್: ನಮ್ಮ ದೇಶದಲ್ಲಿ ಬೆರಳೆಣಿಕೆ ಕ್ರೀಡೆಗಳಿಗೆ ಸಿಗುವ ಮಾನ್ಯತೆ ಬಹುತೇಕ ಕ್ರೀಡೆಗಳಿಗೆ ಸಿಗುತ್ತಿಲ್ಲ. ಈಗ ಇದು ಸತ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಮತ್ತೊಂದು ಸಾಕ್ಷ್ಯ ಇಲ್ಲಿದೆ. ದೇಶಕ್ಕಾಗಿ ಚಿನ್ನದ ಪದಕ ಗೆದ್ದ ಸ್ಕ್ವ್ಯಾಷ್ ಆಟಗಾರನೊಬ್ಬ ದಕ್ಷಿಣ ಏಷ್ಯಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಣವಿಲ್ಲದೆ, ತನ್ನ ಕಿಡ್ನಿಯನ್ನೇ 8 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾನೆ.

ಉತ್ತರ ಪ್ರದೇಶದ ಧಾಮ್ ಪುರ್​ನ ರವಿ ದೀಕ್ಷಿತ್ (23) ಕಳೆದ 10 ವರ್ಷದಿಂದ ಸ್ಕಾ್ವಷ್ ಆಡುತ್ತಿದ್ದು, 2010ರಲ್ಲಿ ನಡೆದ ಏಷ್ಯನ್ ಜೂನಿಯರ್ ಸ್ಕ್ವ್ಯಾಷ್ ಚಾಂಪಿಯನ್​ಷಿಪ್​ನಲ್ಲಿ ​ದೇಶಕ್ಕಾಗಿ ಮೊದಲ ಚಿನ್ನದ ಪದಕ ಪಡೆದಿದ್ದರು. ಆದರೆ ಈತನಿಗೆ ಸ್ಕಾ್ವಷ್​ನಲ್ಲಿ ಇನ್ನಷ್ಟು ಸಾಧನೆ ಮಾಡಲು ಹಣಕಾಸಿನ ಕೊರತೆ ಕಾಡುತ್ತಿದೆ. ಈತನಿಗೆ ನೆರವು ನೀಡುವವರು ಸಿಗುತ್ತಿಲ್ಲ. ಈತ ತನ್ನ ಪ್ರತಿಭೆಯಿಂದಾಗಿ ಫೆಬ್ರವರಿಯಲ್ಲಿ ಗುವಾಹಟಿಯಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಗೇಮ್್ಸ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ನಾಲ್ಕು ಜನ ಸ್ಕ್ವ್ಯಾಷ್ ಕ್ರೀಡಾಪಟುಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇವರಿಗೆ ಹೆಚ್ಚಿನ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹಣಕಾಸಿನ ನೆರವು ಎಲ್ಲೂ ಸಿಗದಿದ್ದಾಗ ತನ್ನ ಕಿಡ್ನಿಯನ್ನೇ ಮಾರಿ ತರಬೇತಿ ಪಡೆದು ಟೂರ್ನಿಯಲ್ಲಿ ಪದಕ ಪಡೆಯಬೇಕು ಎಂದು ನಿಶ್ಚಿಯಿಸಿ ರವಿ ತನ್ನ ಕಿಡ್ನಿಯನ್ನು 8 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಫೇಸ್​ಬುಕ್ ಮತ್ತು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ರವಿ ತಂದೆ ಕೆಲಸ ಮಾಡುವ ಧಾಮ್ ಪುರ್ ಸಕ್ಕರೆ ಕಾರ್ಖಾನೆಯವರು ರವಿಗೆ ಧನ ಸಹಾಯ ನೀಡುತ್ತಿದ್ದರು. ಜತೆಗೆ ಇವರು ವಿವಿಧ ಟೂರ್ನಿಗಳಲ್ಲಿ ಗೆದ್ದ ಪ್ರಶಸ್ತಿ ಮೊತ್ತದಿಂದ ತರಬೇತಿ ಪಡೆಯುತ್ತಿದ್ದರು. ಈಗ ದಕ್ಷಿಣ ಏಷ್ಯಾ ಗೇಮ್ಸ್​ನಲ್ಲಿ ಪಾಲ್ಗೊಳ್ಳಲು ಕನಿಷ್ಠ 1 ಲಕ್ಷ ರೂ. ನ ಅವಶ್ಯಕತೆ ಇದೆ ಆದರೆ ನನಗೆ ಎಲ್ಲೂ ಸಹಾಯ ಸಿಗಲಿಲ್ಲ. ಹಾಗಾಗಿ ಕೊನೆಯ ಆಯ್ಕೆಯಾಗಿ ಕಿಡ್ನಿ ಮಾರಾಟ ಮಾಡುತ್ತಿದ್ದು, ನಮ್ಮ ಮುಂದಿನ ಕ್ರೀಡಾ ಜೀವನ ರೂಪಿಸಿಕೊಳ್ಳಲು ಇದರಿಂದ ಸಾಧ್ಯವಾಗಬಹುದು ಎಂದು ರವಿ ದೀಕ್ಷಿತ್ ಹೇಳಿಕೊಂಡಿದ್ದಾರೆ.

ರವಿ ತಂದೆ ಧಾಮ್ ಪುರ್ ಸಕ್ಕರೆ ಕಾರ್ಖಾನೆಯಲ್ಲಿ ನಾಲ್ಕನೇ ದರ್ಜೆಯ ನೌಕರರಾಗಿ ಕೆಲಸ ಮಾಡುತ್ತಿದ್ದಾರೆೆ. ಅವರ ಸಂಬಳದಲ್ಲಿ ರವಿಗೆ ಹೆಚ್ಚಿನ ತರಬೇತಿ ಕೊಡಿಸಲು ಸಾಧ್ಯವಿಲ್ಲ. ಸಕ್ಕರೆ ಕಾರ್ಖಾನೆಯವರು ಸಹಾಯ ಮಾಡುತ್ತಿದ್ದಾರೆ. ಆದರೆ ಅವರಿಂದಲೇ ಹೆಚ್ಚಿನ ಸಹಾಯ ಕೇಳಲು ಸಾಧ್ಯವಿಲ್ಲ ಎಂದು ರವಿ ತಾಯಿ ಸರ್ವೆಶ್ ಹೇಳುತ್ತಾರೆ.

ಏಷ್ಯನ್ ಜೂನಿಯರ್ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ ಸೇರಿದಂತೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.

Write A Comment