ಮನೋರಂಜನೆ

ಮಿಮಿಕ್ರಿ ಮೂಲಕ ಅವಮಾನ, ಹಾಸ್ಯ ನಟ ಕಿಕು ಬಂಧನ

Pinterest LinkedIn Tumblr

Kiku-webಚಂಡೀಗಢ: ದೆರಾ ಸಚ್ಚಾ ಸೌದಾ ಧಾರ್ವಿುಕ ಪಂಗಡಕ್ಕೆ ಅವಮಾನ ಆಗುವಂತೆ ಪ್ರಮುಖ ಗುರ್​ವಿುೕತ್ ರಾಮ್ ರಹೀಂ ಅವರ ಮಿಮಿಕ್ರಿ ಮಾಡಿದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಜನಪ್ರಿಯ ಹಾಸ್ಯ ನಟ ಕಿಕು ಶಾರದಾ ಅವರನ್ನು ಬುಧವಾರ ಬಂಧಿಸಲಾಗಿದೆ.

ಕಪಿಲ್ ಶರ್ಮ ಅವರ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಕಾರ್ಯಕ್ರಮದಲ್ಲಿ ಗುರ್​ವಿುೕತ್ ರಾಮ್ ರಹೀಂ ಅವರ ಮಾತುಗಳನ್ನು ನಟ ಕಿಕು ತಮ್ಮ ಮಿಮಿಕ್ರಿ ಮೂಲಕ ಪ್ರದರ್ಶಿಸಿ ಪಂಗಡಕ್ಕೆ ಅವಮಾನ ಎಸಗಿದ್ದಾರೆ ಎಂದು ಕೆಲವು ಹಿಂಬಾಲಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೈತಾಲ್ ಪೊಲೀಸರು ಮುಂಬೈನಿಂದ ಕಿಕು ಶಾರದಾ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬುಧವಾರ ಕಡೆಯ ಎಪಿಸೋಡ್​ನ ಶೂಟಿಂಗ್ ವೇಳೆ ಬಂಧಿಸಲಾಗಿದ್ದು, ಬಳಿಕ ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ಹರಿಯಾಣದ ಸಿರಸಾ ಮೂಲದ ಪಂಗಡದ ನಾಯಕ ರಾಮ್ ರಹೀಂ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಕಿಕು ಅವರ ಮಿಮಿಕ್ರಿ ವಿರೋಧಿಸಿ ಭಾರಿ ಪ್ರತಿಭಟನೆ ಕೂಡ ಮಾಡಿದ್ದರು. ಜನವರಿ 1ರಂದು ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಡಿ.27ರಂದು ಪ್ರಸಾರವಾದ ಕಂತಿನಲ್ಲಿ ಅವಮಾನಿಸಲಾಗಿದೆ. ಧಾರ್ವಿುಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಕಿಕು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment