ಮೆಕ್ಸಿಕನ್ ಖ್ಯಾತ ಗಾಯಕಿ ಥಾಲಿಯಾಗೆ ಇದೀಗ ಬರೋಬ್ಬರಿ 44 ವರ್ಷ. ಆದರೆ ಈ ಹಾಡುಗಾರ್ತಿ ನೋಡಲು ಇನ್ನೂ 25-26ಪ್ರಾಯದ ಯುವತಿಯಂತೆ ಕಾಣುತ್ತಾಳೆ. ಈಕೆಯ ಚಿರಯೌವನದ ಹಿಂದಿನ ಗುಟ್ಟನ್ನು ಸಾರ್ವಜನಿಕವಾಗಿ ಬಿಚ್ಚಿಟ್ಟಿದ್ದಾಳೆ ಈ ಚೆಲುವೆ. ಅಂತೆಯೇ ಥಾಲಿಯಾ ಬಿಚ್ಚಿಟ್ಟಿರುವ ಗುಟ್ಟು ಕೇಳಿದ್ರೆ ನಿಮಗೂ ಆಶ್ಚರ್ಯವಾಗುವುದು ಖಚಿತ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಅಂದದ ರಹಸ್ಯವನ್ನು ಬಿಚ್ಚಿಟ್ಟಿರುವ ಈ ಚೆಲುವೆ ಅತಿಯಾದ ಕಾಮೋದ್ರೇಕದಿಂದ ನಮ್ಮ ದೇಹದ 50 ಭಾಗಗಳು ಚಟುವಟಿಕೆಯಿಂದಿರುತ್ತವೆ. ಇದರಿಂದ ವಯಸ್ಸಾಗಿದ್ದರೂ ಚಿರ ಯೌವನದಲ್ಲಿರುವಂತೆ ಕಾಣುತ್ತೇವೆ ಎಂದು ಹೇಳುವ ಮೂಲಕ ತನ್ನ ಅಭಿಮಾನಿಗಳಿಗೆ ಸೆಕ್ಸ್ ಲೈಫ್ ಸೀಕ್ರೇಟ್‌ನ್ನು ಬಹಿರಂಗಪಡಿಸಿದ್ದಾಳೆ ಥಾಲಿಯಾ.
ಸ್ಥಳೀಯ ಮಾಧ್ಯಮಗಳ ಪ್ರಕಾರ ಥಾಲಿಯಾ 67 ವರ್ಷದ ಪತಿಯೊಂದಿಗೆ ಪ್ರತಿರಾತ್ರಿಯಲ್ಲೂ ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತಾರಂತೆ. ಆದರೆ ಅಷ್ಟೊಂದು ವಯಸ್ಸಾಗಿರುವ ವಯೋವೃದ್ಧ ಪತಿಯೊಂದಿಗೆ ಅಷ್ಟೊಂದು ಕಾಮೋದ್ರೇಕಗೊಳ್ಳಲು ಸಾಧ್ಯವಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆಯಂತೆ.