ಮನೋರಂಜನೆ

ಭಾವಿ ಪತ್ನಿ ಸ್ವಾತಿ ಜತೆ ನಿಖಿಲ್‌ಗೆ ಜನ್ಮದಿನ ಸಂಭ್ರಮ

Pinterest LinkedIn Tumblr

Nitingowdaclrಮೈಸೂರು, ಜ. ೨೩- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಭಾವಿ ಪತ್ನಿ ಸ್ವಾತಿ ಅವರೊಂದಿಗೆ ಆಚರಿಸಿಕೊಂಡಿದ್ದಾರೆ.

ನಿನ್ನೆ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾವಿ ಪತ್ನಿ ಸ್ವಾತಿ ಅವರು ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಹುಟ್ಟುಹಬ್ಬದ ದಿನದಂದು ನಿಖಿಲ್ ಅವರ ಕೈಯಿಂದ ಕೇಕ್ ತಿನ್ನುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬೆಂಗಳೂರು ಮೂಲದ ಸಿನಿಮಾ ಹಂಚಿಕೆದಾರರ ಮಗಳಾಗಿರುವ ಸ್ವಾತಿ ಇವರ ತಂದೆ ಜಾಗ್ವಾರ್ ಚಿತ್ರದ ನಿರ್ಮಾಣದಲ್ಲೂ ಸಹಾಯ ಮಾಡುತ್ತಿದ್ದಾರೆ.

ನಿಖಿಲ್ ಗೌಡರ ಜಾಗ್ವಾರ್ ಸಿನಿಮಾ ತೆರೆಕಂಡ ನಂತರ ಇವರ ಮದುವೆ ನೆರವೇರಲಿದೆ ಎಂದು ಗಾಂಧಿ ನಗರದ ಮೂಲಗಳು ತಿಳಿಸಿವೆ.

Write A Comment