ಚೆನ್ನೈ: ಬಹುಭಾಷಾ ಕಲಾವಿದ ಪ್ರಕಾಶ್ ರೈ ಪತ್ನಿ ಪೋನಿ ವರ್ಮಾ ಫೆ.3 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಟ್ವಿಟರ್ ನಲ್ಲಿ ಸ್ವತಃ ಪ್ರಕಾಶ್ ರೈ ಈ ಸುದ್ದಿಯನ್ನು ಹಂಚಿಕೊಂಡಿದ್ದು, “ನಾನು ಮತ್ತು ಪೋನಿ ವರ್ಮಾ ಗಂಡು ಮಗು ಪಡೆದಿರುವ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಗನಿಗೆ ಶುಭ ಹಾರೈಸಿ” ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
2009 ರಲ್ಲಿ ಮೊದಲ ಪತ್ನಿ ಲಲಿತಾ ಕುಮಾರಿಗೆ ವಿಚ್ಛೇಧನ ನೀಡಿದ ಬಳಿಕ 2010 ರಲ್ಲಿ ಪ್ರಕಾಶ್ ರೈ, ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿಯಾಗಿರುವ ಪೋನಿ ವರ್ಮಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಕಾಶ್ ರೈ ಮೊದಲ ಪತ್ನಿಗೆ ಇಬ್ಬರು ಪುತ್ರಿಯರಿದ್ದಾರೆ.