ನವದೆಹಲಿ: ದೇಶದಲ್ಲಿ ಅಸಹಿಸ್ಣುತೆ ಇದೆ ಎಂಬ ವಿವಾದಿತ ಹೇಳಿಕೆಯಿಂದ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ರಾಯಭಾರಿ ಸ್ಥಾನದಿಂದ ಕೊಕ್ ಪಡೆದಿದ್ದ ನಟ ಆಮೀರ್ಖಾನ್ಗೆ ಈಗ ಮತ್ತೊಂದು ಶಾಕ್.
ಭಾರತದ ಯುವ ಉತ್ಸಾಹಿಗಳು ನಿರ್ವಿುಸಿದ ಸ್ನ್ಯಾಪ್ ಡೀಲ್ ಎಂಬ ಅಂತರ್ಜಾಲ ಮಾರಾಟ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದ ಆಮೀರ್ ಖಾನ್ರನ್ನು ಸಂಸ್ಥೆ ಕೈಬಿಡಲಿದೆ. ಈ ತಿಂಗಳ ಅಂತ್ಯಕ್ಕೆ ಆಮೀರ್ ಜತೆ ಮಾಡಿಕೊಂಡಿದ್ದ ಒಪ್ಪಂದ ಮುಗಿಯಲಿದ್ದು ಅದನ್ನು ನವೀಕರಿಸದೆಯೇ ಸಂಸ್ಥೆಯ ಅಭಿವೃದ್ದಿಗೆ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದಾಗಿ ಕಂಪನಿ ತಿಳಿಸಿದೆ.
ಅಸಹಿಸ್ಣುತೆ ಹೇಳಿಕೆಯಿಂದ ಆಮೀರ್ ರಾಯಭಾರಿಯಾಗಿದ್ದ ಸ್ನ್ಯಾಪ್ ಡೀಲ್ ಮೊಬೈಲ್ ಆಪ್ನ್ನು ಲಕ್ಷಾಂತರ ಮಂದಿ ತೆಗೆದುಹಾಕಿದ್ದರು.