ಪ್ರೇಮಿಗಳ ದಿನ ಹತ್ತಿರ ಬರುತ್ತಿರುವುದಕ್ಕೇನೋ ಗೊತ್ತಿಲ್ಲ. ಬಾಲಿವುಡ್ ನಟರು ತಮ್ಮ ನೆಚ್ಚಿನ ಬೆಡಗಿಯರ ಬಗ್ಗೆ ಬಿಚ್ಚು ಮನಸಿನಿಂದ ಮಾತನಾಡುತ್ತಿದ್ದಾರೆ.
ಶಾಹೀದ್ ಕಪೂರ್ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಿಯಾಂಕ ಚೋಪ್ರಾಳನ್ನು ಹಾಡಿ-ಹೊಗಳಿದ್ದಾನೆ. ಚೋಪ್ರಾ ಹಾಲಿವುಡ್ ಎಂಟ್ರಿ ಬಗ್ಗೆ ಶಾಹೀದ್‌ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ‘ಪ್ರಿಯಾಂಕ ಹಾಲಿವುಡ್ ಎಂಟ್ರಿ ಬಗ್ಗೆ ನನಗೆ ಅತೀವ ಸಂತಸವಾಗಿದೆ. ಅವಳ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಅವಳಿಗೆ ಅಂತಾರಾಷ್ಟ್ರೀಯ ನಟಿಯಾಗುವ ಎಲ್ಲ ಅರ್ಹತೆಗಳಿವೆ. ಅವಳು ಸಾಧಿಸಿದ್ದಾಳೆ’ ಎಂದು ಹೇಳಿದ್ದಾನೆ.
ತನ್ನ ಮಾಜಿ ಪ್ರಿಯತಮೆಯ ಬಗ್ಗೆ ಶಾಹೀದ್ ಹೊಗಳಿದ್ದು ತಪ್ಪಲ್ಲ. ಆದರೆ, ಅವಳು ಹಾಲಿವುಡ್‌ಗೆ ಹಾರಿದ ನಂತರ, ಅವಳಿಗೆ ಶಾಹೀದ್ ಸರ್ಟಿಫಿಕೇಟ್ ಕೊಟ್ಟಿರುವ ಹಿಂದಿನ ಮರ್ಮ ಏನು ಎಂಬುದೇ ಬಿ ಟೌನ್‌ನ ಬಿಗ್ ಪ್ರಶ್ನೆ.