ಗೂಗಲ್ ಇಂದು 2GB ಹೆಚ್ಚುವರಿ ಡ್ರೈವ್ ಜಾಗವನ್ನು ಉಚಿತವಾಗಿ ನೀಡುತ್ತಿದೆ. ಅದರ ವಾರ್ಷಿಕ ಸಂಪ್ರದಾಯದಂತೆ, ಗೂಗಲ್ ಮತ್ತೆ ಸಂಕ್ಷಿಪ್ತ ಖಾತೆ ಭದ್ರತಾ ತಪಾಸಣೆಯನ್ನು ಪೂರ್ಣಗೊಳಿಸಿದ ಬಳಕೆದಾರರಿಗೆ “ಗೂಗಲ್ ಡ್ರೈವ್” ಉಚಿತ ಸಂಗ್ರಹ ಜಾಗವನ್ನು ಒದಗಿಸುತ್ತಿದೆ. ಈ ತಪಾಸಣೆಯಲ್ಲಿ 2-Step ಸೆಟ್ಟಿಂಗ್ಸ್, ನಿಮ್ಮ ಖಾತೆ ಮಾಹಿತಿ ಮತ್ತು ನೀವು ಬಳಸುತ್ತಿರುವ Apps ಪರಿಶೀಲಿಸಿದ ಬಳಿಕ 2GB ಹೆಚ್ಚುವರಿ ಜಾಗವನ್ನು ನಿಮ್ಮ ಖಾತೆಗೆ ಉಚಿತವಾಗಿ ಸೇರಿಸಲಾಗುತ್ತದೆ. ಈ ವಿಧಾನವನ್ನು 2 ನಿಮಿಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದಾಗಿದೆ.
ಗೂಗಲ್ ಈ ತರಹದ ಪ್ರಚಾರವನ್ನು ಹಿಂದಿನ ವರ್ಷವೂ ನಡೆಸಿತ್ತು. ನೀವು ಹಿಂದಿನ ಪ್ರಚಾರದ ವೇಳೆ 2GBಉಚಿತ ಜಾಗವನ್ನು ಪದೆದಿದ್ದಿರಾದರೆ, ಈ ಬಾರಿಯೂ ಮತ್ತೊಮ್ಮೆ ಪಡೆಯಬಹುದಾಗಿದೆ.
ನಿಮ್ಮ ಉಚಿತ 2GB ಜಾಗವನ್ನು ಖಾದಿರಿಸಲು ದಯವಿಟ್ಟು ಈ ಕೊಂಡಿಯನ್ನು ಕ್ಲಿಕ್ ಮಾಡಿ.
https://security.google.com/settings/security/secureaccount