ಮನೋರಂಜನೆ

ಯಾವಾಗ ಮೈ ತೋರಿಸ್ತೀರಿ?: ಸೋನಾಕ್ಷಿಗೆ ಪ್ರಶ್ನೆ!

Pinterest LinkedIn Tumblr

sonakshi-sinhaನವದೆಹಲಿ: ಯಾವಾಗ ನಿಮ್ಮ ಮೈಮಾಟ ತೋರಿಸುತ್ತೀರಿ? ನೀವ್ಯಾವಾಗ ಬಿಕಿನಿ ಹಾಕುತ್ತೀರಿ..? ಹೀಗಂತ ಕೇಳಿದ ಅಭಿಮಾನಿಯೊಬ್ಬನಿಗೆ ನಟಿ ಸೋನಾಕ್ಷಿ ಸಿನ್ಹಾ ಮಾತಿನ ತಪರಾಕಿ ನೀಡಿದ್ದಾರೆ.

ಸೋಮವಾರ ಸಂಜೆ ವಾರದ “ಸೋನಾಕ್ಷಿ ಮಾತು’ ಅಭಿಮಾನಿಗೊಂದಿಗಿನ ಟ್ವೀಟರ್‌ ಮಾತುಕತೆ ವೇಳೆ ಪ್ರತೀಕ್‌ ಗೋಯಲ್‌ ಎಂಬಾತ ಬಿಕಿನಿ ಪ್ರಶ್ನೆ ಕೇಳಿದ್ದಾನೆ. ಈ ವೇಳೆ ಸೋನಾಕ್ಷಿ, “ಇದೇ ಪ್ರಶ್ನೆಯನ್ನು ನಿಮ್ಮ ತಾಯಿ ಮತ್ತು ತಂಗಿಗೆ ಕೇಳಿ. ಅವರು ಏನು ಹೇಳುತ್ತಾರೆ ಎನ್ನುವುದು ನನಗೆ ಬೇಕು’ ಎಂದು ಝಾಡಿಸಿದ್ದಾರೆ.

ಈ ಉತ್ತರ ಹೇಳುತ್ತಿದ್ದಂತೆ ಇಡೀ ಟ್ವೀಟರ್‌ ನಲ್ಲಿ ಸೋನಾಕ್ಷಿ ವಿಚಾರ ವೈರಲ್‌ ಆಗಿದ್ದು ಭರ್ಜರಿ ಚರ್ಚೆಯಾಗಿದೆ.

-ಉದಯವಾಣಿ

Write A Comment