ಮನೋರಂಜನೆ

ಹಿಂದಿ ಪತ್ರಿಕೆಯ ವಿರುದ್ಧ ರು.100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಧೋನಿ

Pinterest LinkedIn Tumblr

dhoni

ನವದೆಹಲಿ: ಓಲ್ಡ್ ಟ್ರಾಫೋಡ್‌ನಲ್ಲಿ 2014ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ವರದಿ ಮಾಡಿದ್ದ ಹಿಂದಿ ಭಾಷೆಯ ಪತ್ರಿಕೆ ವಿರುದ್ಧ ಎಂಎಸ್ ಧೋನಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಪಿಚ್ ಒದ್ದೆಯಾಗಿದ್ದ ಕಾರಣ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಟೀಂ ಇಂಡಿಯಾ ತೀರ್ಮಾನಿಸಿತ್ತು. ಆದರೆ ಟಾಸ್ ಗೆದ್ದ ಧೋನಿ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇಲ್ಲಿ ಧೋನಿ ಮ್ಯಾಚ್ ಫಿಕ್ಸಿಂಗ್ ಮಾಡಿರುವುದಾಗಿ ಎಂದು ಟೀಂ ಇಂಡಿಯಾದ ಮಾಜಿ ಮ್ಯಾನೇಜರ್ ಸುನೀಲ್ ದೇವ್ ಆರೋಪಿಸಿದ್ದಾರೆ ಎಂದು ಹಿಂದಿ ಪತ್ರಿಕೆ ವರದಿ ಮಾಡಿತ್ತು. ಪ್ರಸ್ತುತ ಪತ್ರಿಕೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸುನೀಲ್ ದೇವ್ ಅವರು ಈ ರೀತಿ ಆರೋಪಿಸಿದ್ದಾರೆ ಎಂದು ಪತ್ರಿಕೆ ಹೇಳಿತ್ತು.

ಈ ರೀತಿಯ ವರದಿ ಪ್ರಕಟಿಸಿದ್ದಕ್ಕೆ ಧೋನಿ ಅವರ ನ್ಯಾಯವಾದಿ ಪತ್ರಿಕೆಗೆ 7 ಪುಟಗಳ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಧೋನಿ ಬಗ್ಗೆ ಈ ರೀತಿಯ ಸುದ್ದಿ ಪ್ರಕಟಿಸಿ ಆತನನ್ನು ಅವಮಾನಿಸಿದಕ್ಕಾಗಿ ರು.100 ಕೋಟಿ ಮಾನನಷ್ಟ ಪರಿಹಾರಧನ ಕೊಡಬೇಕೆಂದು ಈ ನೋಟಿಸ್‌ನಲ್ಲಿ ಹೇಳಲಾಗಿದೆ.

Write A Comment