ಮೊನ್ನೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು , ನೀಲಿ ರಾಣಿ ಸನ್ನಿ ಲಿಯೋನ್‌ಳ ಜತೆ ನಡೆಸಿದ ಸಂದರ್ಶನ ಇಡೀ ವೀಕ್ಷಕ ಸಮುದಾಯ, ವಿಶೇಷವಾಗಿ ಬಾಲಿವುಡ್ ಮಂದಿಯನ್ನು ಮಂತ್ರ ಮುಗ್ಧರನ್ನಾಗಿಸಿದೆಯಂತೆ. ಆ ಸಂದರ್ಶನದ ವಿಶೇಷವೆಂದರೆ ಸಂದರ್ಶಕನ ಸಣ್ಣತನ ಹಾಗೂ ಸನ್ನಿಯ ಪ್ರಾಮಾಣಿಕ ಹಾಗೂ ಪ್ರೌಢ ನಡೆಗೆ ಮನಸೋಲದವರೇ ಇಲ್ಲವಂತೆ. ಸಂದರ್ಶನದ ನಂತರ ಪತ್ರಿಕೆಗಳೆಲ್ಲ ಸನ್ನಿ ಲಿಯೋನ್‌ಳನ್ನು ಹೊಗಳಿದ್ದೇ ಹೊಗಳಿದ್ದು. ಅಷ್ಟೇ ಅಲ್ಲ ಬಾಲಿವುಡ್ ಜಗತ್ತಿನ ಎಲ್ಲಾ ಹಿರಿ-ಕಿರಿಯರೂ ಸನ್ನಿಯ ಬೆನ್ನಿಗೆ ನಿಂತರಂತೆ.
ಭಲೇ… ಸನ್ನಿ ಅಂತ ಎಲ್ಲ ಉದ್ಗರಿಸಿದರಂತೆ. ಈ ಎಲ್ಲಾ ಪ್ರಸಂಗಗಳಿಗಿಂತಲೂ ಅತ್ಯಂತ ಪ್ರಮುಖವಾದ ಅಂಶ ಅಂದ್ರೆ ಬಿ ಟೌನ್‌ನ ಒಂದು ಕಾಲದ ಹೀರೋ. ಅಮೋಲ್ ಪಾಲೇಕರ್ ಪತ್ನಿ ಸಂಧ್ಯಾ ಗೋಖಲೆ ಸನ್ನಿಗೆ ಬಂದು ಸುದೀರ್ಘ ಪತ್ರವನ್ನೇ ಬರೆದಿದ್ದಾರೆ.
ಹಲೋ… ಸನ್ನಿ… ನಿನ್ನ ಪ್ರೌಢತೆ, ತಾಳ್ಮೆ, ಜಾಣ್ಮೆಯ ಉತ್ತರಗಳು ಎಷ್ಟು ಅದ್ಭುತವಾಗಿದ್ದವೆಂದರೆ, ನಿನ್ನನ್ನು ಬೆತ್ತಲುಗೊಳಿಸಲು ಪ್ರಯತ್ನಿಸಿದ ಸಂದರ್ಶಕ ತಾನೇ ಬೆತ್ತಲಾಗಿ ಹೋದ… ಹ್ಯಾಟ್ಸ್ ಆಫ್ ಸನ್ನೀ… ಥ್ಯಾಂಕ್ಯೂ… ಎಂದಿದಾ ರಂತೆ.