ಮನೋರಂಜನೆ

ಸಚಿನ್ ದಾಖಲೆ ಮುರಿದ ಅಸ್ಟ್ರೇಲಿಯಾದ ಬ್ಯಾಟ್ಸ್​ಮನ್ ವೋಜಸ್

Pinterest LinkedIn Tumblr

1-Vogesವೆಲ್ಲಿಂಗ್ಟನ್: ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಆಡಂ ವೋಜಸ್ ಟೆಸ್ಟ್ ಕ್ರಿಕೆಟ್​ನಲ್ಲಿ ಸತತ ಮೂರು ಅಜೇಯ ಇನಿಂಗ್ಸ್​ನೊಂದಿಗೆ ಗರಿಷ್ಠ ರನ್ ದಾಖಲಿಸಿ ದಿಗ್ಗಜ ಬ್ಯಾಟ್ಸ್​ಮನ್ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದಿದ್ದಾರೆ.

ಪ್ರಸಕ್ತ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ವೆಲ್ಲಿಂಗ್ಟನ್​ನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಈ ದಾಖಲೆ ರಚಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಹೋಬರ್ಟ್​ನಲ್ಲಿ 269*, ಮೆಲ್ಬೋರ್ನ್​ನಲ್ಲಿ 106*, ಈಗ 176*ರನ್ ಸೇರಿದಂತೆ ಒಟ್ಟು 551*ರನ್ ಸಿಡಿಸಿ ಸಚಿನ್ ಸಿಡಿಸಿದ 497ರನ್ (ಆಸ್ಟ್ರೇಲಿಯಾ ವಿರುದ್ಧ 241*, 60*, ಪಾಕಿಸ್ತಾನ ವಿರುದ್ಧ 194*) ದಾಖಲೆಯನ್ನು ಹಿಂದಿಕ್ಕಿದರು. ವೆಸ್ಟ್ ಇಂಡೀಸ್ ದಿಗ್ಗಜ ಸರ್ ಗ್ಯಾರಿ ಸೋಬರ್ಸ್(490)ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್​ಮನ್.

ಜತೆಗೆ ಇದೇ ಪಂದ್ಯದಲ್ಲಿ ವೋಜಸ್ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಸರಾಸರಿ ಸಾಧಿಸುವ ಮೂಲಕ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2 ನೇ ದಿನದಾಟದ ನಂತರ ವೋಜಸ್ ಅವರು 100.33 ಸರಾಸರಿ ಹೊಂದಿದ್ದಾರೆ. ವೋಜಸ್ ಈ ಸಾಧನೆಯನ್ನು ಕೇವಲ 19 ಇನ್ನಿಂಗ್ಸ್​ಗಳಲ್ಲಿ ಪೂರೈಸಿರುವುದು ವಿಶೇಷ.

Write A Comment