ಗೂಗಲ್ ಮುಂಬರುವ ಮೇ ತಿಂಗಳಲ್ಲಿ ತನ್ನ ಫೋಟೋ ಶೇಖರಣಾ ಸೇವೆಯಾದ “Picasa”ವನ್ನು ಸ್ತಗಿತಗೊಳಿಸುವುದಾಗಿ ತನ್ನ ಬ್ಲಾಗ್ನಲ್ಲಿ ಘೋಷಿಸಿದೆ. ಮಾರ್ಚ್‌ನಲ್ಲಿ ಆರಂಭಗೊಂಡು ಕಂಪೆನಿಯು ಮೊದಲು Picasa Desktop ಅಪ್ಪ್ಲಿಕೇಶನನ್ನು ಸ್ತಗಿತಗೊಳಿಸಿ, ನಂತರ ಮೇ ತಿಂಗಳಲ್ಲಿ “Picasa Web Album”ಗಳನ್ನು ಪರಿಷ್ಕರಿಸುವ ಸೌಲಭ್ಯವನ್ನು ಸ್ತಗಿತಗೊಳಿಸುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಗೂಗಲ್ ಸಹಜವಾಗಿ ಪಿಕಾಸಾ ಪರ್ಯಾಯವಾಗಿ ತನ್ನದೇ ಆದ “Google Photos” ಅಪ್ಪ್ಲಿಕೇಶನನ್ನು ಸೂಚಿಸುತ್ತಿದೆ. ಬಳಕೆದಾರರು, ಪಿಕಾಸಾ ಖಾತೆಯನ್ನೇ ಉಪಯೋಗಿಸಿ ಗೂಗಲ್ ಫೋಟೋಸ್ ನಲ್ಲಿ ಚಿತ್ರಗಳನ್ನು ಅಪ್ಲೋಡ್ ಮತ್ತು ಪರಿಷ್ಕರಿಸಬಹುದಾಗಿದೆ. ಪಿಕಾಸಾ ಬಳಕೆದಾರರು ತಮ್ಮ ಖಾತೆಗೆ ಈ ಮೊದಲು ಅಪ್ಲೋಡ್ ಮಾಡಿರುವ ಎಲ್ಲಾ ಚಿತ್ರಗಳು ಮತ್ತು ವೀಡಿಯೋಗಳು ಗೂಗಲ್ ಫ಼ೋಟೋಸ್ ಖಾತೆಯಲ್ಲಿ ಲಭ್ಯವಾಗಲಿವೆ. ಆದರೆ ಗೂಗಲ್ ಫ಼ೋಟೋಸ್ ಬಳಸಲು ಇಷ್ಟಪಡದ ಬಳಕೆದಾರರಿಗೆ ತಮ್ಮ ಪಿಕಾಸಾ ಆಲ್ಬಮ್ಗಳನ್ನು ಡೌನ್‌ಲೋಡ್ ಮಾಡಲು ಅಥವಾ ಅಳಿಸಲು ಅವಕಾಶವಿದೆಯೆಂದು ಗೂಗಲ್ ತಿಳಿಸಿದೆ.
ಪಿಕಾಸಾ ಸೇವೆಯನ್ನು ಇತರ ಚಿತ್ರ ಹಂಚಿಕೆ ಜಾಲಗಳಿಗೆ ಪೈಪೋಟಿ ನೀಡುವ ಸಲುವಾಗಿ 2004ರಲ್ಲಿ Lifescape ಎಂಬ ಕಂಪೆನಿಯಿಂದ ಗೂಗಲ್ ಸ್ವಾಧೀನಪಡಿಸಿಕೊಂಡಿತ್ತೆಂದು ಇಲ್ಲಿ ಸ್ಮರಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಳಿ ಈ ಕೊಂಡಿಯನ್ನು ಕ್ಲಿಕ್ ಮಾಡಿ :
http://googlephotos.blogspot.com/2016/02/moving-on-from-picasa.html