ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ರ ಒಂದೇ ವೇದಿಕೆ ಮೇಲೆ ಒಗ್ಗೂಡಲಿರುವ ಸದವಾಕಾಶ ಈ ಇಬ್ಬರು ಅಭಿಮಾನಿಗಳಿಗೆ ಕಾಣಸಿಗಲಿದೆ.
ನಡಿಗರ್ ಸಂಗಂ ಕಟ್ಟಡ ನಿರ್ಮಾಣಕ್ಕಾಗಿ ದಕ್ಷಿಣ ಭಾರತ ಕಾಲಾವಿದರ ಸಂಘ ಕ್ರಿಕೆಟ್ ಪಂದ್ಯಾವಳಿಯೊಂದನ್ನು ನಡೆಸಲಿದೆ. ಈ ಪಂದ್ಯ ಏಪ್ರಿಲ್ 10ರಂದು ಚೆನ್ನೈನಲ್ಲಿ ನಡೆಯಲಿದೆ.
ನಡಿಗರ್ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಸದ್ಯ 48 ಲಕ್ಷ ರುಪಾಯಿ ನಗದು ಸಂಗ್ರಹಿಸಲಾಗಿದೆ. ಇನ್ನುಳಿದಂತೆ 2 ಕೋಟಿ ರುಪಾಯಿಯನ್ನು ಬ್ಯಾಂಕ್ ನಿಂದ ಸಾಲ ಪಡೆಯಲಾಗುವುದು. ಇನ್ನು ಹೆಚ್ಚಿನ ಹಣ ಸಂಗ್ರಹಕ್ಕಾಗಿ ಸೆಲೆಬ್ರಿಟಿ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗುತ್ತಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಲು ಇಬ್ಬರು ಖ್ಯಾತನಾಮರಿಗೆ ಕೋರಲಾಗಿದೆ. ಇಬ್ಬರು ನಟರು ಬರುವುದಾಗಿ ನಡಿಗರ್ ಸಂಘಂ ಮೂಲಗಳು ತಿಳಿಸಿವೆ.
ಕಬಾಲಿ ಹಾಗೂ 2.0 ಚಿತ್ರದ ಚಿತ್ರೀಕರಣದಲ್ಲಿ ರಜನಿಕಾಂತ್ ಅವರು ತೊಡಗಿಕೊಂಡಿದ್ದಾರೆ.