ದೇಶದ ಎಲ್ಲ 46 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಭಾರತದ ತ್ರಿವರ್ಣ ಧ್ವಜ ಹಾರಿಸಬೇಕು ಎನ್ನುವ ಕೇಂದ್ರ ಸರ್ಕಾರದ ಹೊಸ ನಿಯಮಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಟೀಮ್ ಇಂಡಿಯಾ ಆರಂಭಿಕ ಶಿಖರ್ ಧವನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ತ್ರಿವರ್ಣಧ್ವಜ ದೇಶದ ಹೆಮ್ಮೆಯ ಪ್ರತೀಕಾ. ದೇಶಾದ್ಯಂತ ತ್ರಿವರ್ಣಧ್ವಜ ಹಾರಾಡಬೇಕು ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ.
ಎಲ್ಲ ವಿವಿಗಳಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು. ಧ್ವಜ ನಮ್ಮ ದೇಶದ ಹೆಮ್ಮೆ. ದೇಶದಲ್ಲಿ ಜೀವಿಸುವ ಪ್ರತಿಯೊಬ್ಬ ಪ್ರಜೆಯೂ ದೇಶದ ವಿರುದ್ಧವಾಗಿ ಮಾತನಾಡಬಾರದು ಎನ್ನುವ ಆಶಯ ನನ್ನದು’ ಎಂದು ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಧವನ್ ಹೇಳಿದ್ದಾರೆ.