ಮೊಹಾಲಿ (ಪಿಟಿಐ): ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ರಿಕೆಟ್ ಆಟಗಾರ ಶೇನ್ ವಾಟ್ಸನ್ ಅವರು ಟಿ–20 ವಿಶ್ವಕಪ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
ಮೊಹಾಲಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸದ ವೇಳೆ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿದರು.
ಶೇನ್ ವಾಟ್ಸನ್ ಅವರು 59 ಟೆಸ್ಟ್ ಪಂದ್ಯಗಳಿಂದ 75 ವಿಕೆಟ್ ಹಾಗೂ 3731ರನ್‌ಗಳು, 190 ಏಕ ದಿನ ಪಂದ್ಯಗಳನ್ನು ಆಡಿ 5757 ರನ್‌ಗಳು ಮತ್ತು 168 ವಿಕೆಟ್‌ಗಳನ್ನು ಪಡೆದಿದ್ದಾರೆ. 56 ಟಿ–20 ಪಂದ್ಯಗಳಲ್ಲಿ 1400 ರನ್‌ಗಳು ಹಾಗೂ 46 ವಿಕೆಟ್‌ಗಳನ್ನು ಕಬಳಿಸಿದ್ದಾರೆ.