ಭಾರತ ಕ್ರಿಕೆಟ್ ತಂಡದ ಉಪನಾಯಕ ವಿರಾಟ್‌ಕೊಹ್ಲಿ ದೇಹ, ಆರೋಗ್ಯದ ಬಗ್ಗೆ ಹೊಸ ಪರಿಕಲ್ಪನೆಯೊಂದಿಗೆ ನೆವರ್ ಸ್ಟಾಪ್ ಫಿಟ್‌ನೆಸ್ ಪಾರ್ಟಿ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಚಿಸೆಲ್ ಬ್ರಾಂಡ್‌ನ ಮಾಲೀಕರು ಆಗಿರುವ ವಿರಾಟ್ ಕೊಹ್ಲಿ ಫಿಟ್‌ನೆಸ್ ಪಾರ್ಟಿಗೆ ಚಾಲನೆ ನೀಡಿದರು. ವಿನೂತನವಾದ ಮನೋರಂಜನೆ ಜತೆಜತೆಯಲ್ಲೇ ದೈಹಿಕ ಕಸರತ್ತಿನ ವಿವಿಧ ಹೊಸಹೊಸ ವಿಧಾನಗಳನ್ನು ಅಳವಡಿಸಲಾಗಿದೆ. ಇಂಗ್ಲೆಂಡ್‌ನ ಹೆಸರಾಂತ ಫಿಟ್‌ನೆಸ್ ಸಂಸ್ಥೆಯಾಗಿರುವ ಲೆಸ್‌ಮಿಲ್ಸ್‌ನ ಹೊಸ ಬಗೆಯ ವ್ಯಾಯಾಮ ಸೇರಿದಂತೆ ಹತ್ತು ಹಲವು ಬಗೆಯ ಫಿಟ್‌ನೆಸ್ ತಂತ್ರಗಳನ್ನು ಪರಿಚಯ ಮಾಡಿಕೊಡಲಾಯಿತು.
ಸಹ ಸಂಸ್ಥಾಪಕ ಸತ್ಯಸಿನ್ಹಾ ಮಾತನಾಡಿ, ನಮ್ಮ ಫಿಟ್‌ನೆಸ್ ಕೇಂದ್ರಗಳನ್ನು ಬೆಂಗಳೂರು ಮತ್ತು ಆಂಧ್ರಪ್ರದೇಶದಲ್ಲಿ ಆರಂಭಿಸಲಾಗಿದ್ದು, ಮುಂದಿನ ಕೆಲವು ತಿಂಗಳಲ್ಲಿ ದೆಹಲಿ, ಮುಂಬೈ, ಗುವಾಹತಿ, ಹೈದ್ರಾಬಾದ್, ಇಂದೋರ್ ಮತ್ತು ಚೆನ್ನೈನಲ್ಲಿ ಆರಂಭಿಸುತ್ತೇವೆ. ಈ ಮೂಲಕ 2018 ರ ವೇಳೆಗೆ ದೇಶದಲ್ಲಿ 100 ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕಿಕ್ ಬಾಕ್ಸಿಂಗ್, ಬಾಡಿ ಜಿಮ್, ಬಾಡಿ ಕಂಬ್ಯಾಟ್, ಬಾಡಿ ಪಂಪ್, ಗ್ರಿಟ್ ಸೀರೀಸ್, ಆರ್‌ಪಿಎಂ, ಕ್ರಾಸ್‌ಫಿಟ್, ಫಂಕ್ಷನಲ್ ಟ್ರೈನಿಂಗ್, ಕ್ರೀಡೆಗೆ ಅಗತ್ಯವಿರುವ ತರಬೇತಿ, ಹೊರಾಂಗಣ ಕಸರತ್ತು, ಸ್ವಿಮ್ ಜಿಮ್, ಎಕ್ಸರ್ ಗೇಮಿಂಗ್, ಪವರ್‌ಯೋಗ ಸೇರಿದಂತೆ ಹಲವರು ಹೊಸ ಹೊಸ ತಂತ್ರಗಳನ್ನು ಅಳವಡಿಸುವ ಮೂಲಕ ಅತ್ಯುತ್ತಮವಾದ ಫಿಟ್‌ನೆಸ್ ಮಂತ್ರಗಳನ್ನು ನಾವು ಹೇಳಿಕೊಡಲಾಗುತ್ತದೆ ಎಂದು ಹೇಳಿದರು.