ಮನೋರಂಜನೆ

ಯೋಗರಾಜ ಭಟ್ಟರು ಹಾಡು ಬಿಟ್ಟರು

Pinterest LinkedIn Tumblr

yojrajಕಾಣೆಯಾಗಿದ್ದಾರೆ ಅಂತ ಪ್ರಕಟಣೆ ಕೊಟ್ಟರೂ ಸಿಗದ ಯೋಗರಾಜ ಭಟ್ಟರು ಒಂದು ವರ್ಷದ ನಂತರ ಜಗತ್ತಿನ ಮುಂದೆ ಬಂದಿದ್ದಾರೆ. ಈಗ ಅವರ ಜೊತೆ “ದನ ಕಾಯೋನು’ ಇದ್ದಾನೆ.

ಒನ್‌ಫೈನ್‌ ಡೇ ವಿಜಿ ಜೊತೆ “ದನ ಕಾಯೋನು’ ಸಿನಿಮಾ ಮಾಡ್ತಿದೀನಿ ಅಂತ ಘೋಷಣೆ ಮಾಡಿದ ಭಟ್ಟರು ಆಮೇಲೆ ತಿಂಗಳು ಗಟ್ಟಲೆ ಮಾತೇ ಆಡಲಿಲ್ಲ. ಈಗ ಒಂದು ತಿಂಗಳಿಂದ ಆಲ್ಬಂ ಶೀಘ್ರಂ ಅಂತ ಹೇಳಿಕೊಂಡು
ತಿರುಗಾಡುತ್ತಿದ್ದಾರೆಯೇ ಹೊರತು ಆಡಿಯೋ ರಿಲೀಸ್‌ ಮಾಡಲಿಲ್ಲ.

ಭಟ್ಟರದು ಒಂದು ಸ್ಟೈಲ್‌ ಇದೆ. ಸಿನಿಮಾ ಬಿಡುಗಡೆ ಮಾಡೋ ಮೊದಲು ಹಾಡನ್ನು ಜಗತ್ತಿಗೆ ಸಮರ್ಪಿಸುತ್ತಾರೆ.
ಅವರ ಹಾಡನ್ನು ಇಷ್ಟ ಪಡೋ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇಷ್ಟ ಪಡದೇ ಇದ್ದವರು ಕೂಡಾ ಹಾಡು ಕೇಳುತ್ತಾರೆ. ಹಾಗಾಗಿ ಯೋಗರಾಜ ಭಟ್ಟರ ಹಾಡುಗಳಿಗೇ ಸಿಕ್ಕಾಪಟ್ಟೆ ಡಿಮ್ಯಾಂಡು. ಅವರಿಗೆ ಹಾಡುಗಳಲ್ಲಿ ಈ ಕಾಲದವರನ್ನು ಅಚ್ಚರಿಗೊಳಿಸುವ ರೂಪಕಗಳಿರುತ್ತವೆ. ಆ ರೂಪಕಗಳನ್ನಿಟ್ಟುಕೊಂಡೇ ಭಟ್ಟರು ಹಾಡು ಕೇಳ್ಳೋರನ್ನು ಆಳುತ್ತಾರೆ.

ಅಂದಹಾಗೆ, ಅವರ ಹೊಸ ಸಿನಿಮಾದ ಹೆಸರು “ದನ ಕಾಯೋನು’. ಹೇಳಿಕೇಳಿ ಭಟ್ಟರಿಗೆ ದನ ಕಾಯೋದು ಅಂದ್ರೆ ಇಷ್ಟ. ದನ ಕಾಯುತ್ತಿದ್ದ ಶ್ರೀಕೃಷ್ಣ ಪರಮಾತ್ಮ ಅಂದರಂತೂ ಅವರಿಗೆ ಸಕತ್‌ ಪ್ರೀತಿ. ಇವೆರಡೂ ಒಟ್ಟಿಗೆ ಸೇರಿಕೊಂಡು
ಒಂದೊಳ್ಳೆ ಆಲ್ಬಂ ಕೊಡಬಹುದು ಅನ್ನೋ ನಿರೀಕ್ಷೆಯಲ್ಲಿದ್ದವರಿಗೆ ಭಟ್ಟರು ಬೇಸರ ಮಾಡಿದಂತಿಲ್ಲ. ಹಾಡುಗಳಲ್ಲಿ ಇಮೇಜ್‌ಗಳನ್ನು ಕಟ್ಟಿಕೊಡುತ್ತಲೇ ಮಧ್ಯದಲ್ಲೆಲ್ಲೋ ತುಂಡು μಲಾಸμ ಯನ್ನು ರಪಕ್ಕಂತ ಹೇಳಿ ಹಾಡಿಗೊಂದು ಬೇರೆ ಆ್ಯಂಗಲ್‌ ಕೊಡುವ ಭಟ್ಟರು ಇತ್ತೀಚೆಗೆ ಆಕಸ್ಮಿಕವಾಗಿ ಸಿಕ್ಕಿ ಐದು ಹಾಡುಗಳನ್ನು ಕೇಳಿಸಿದರು.

ಅದರಲ್ಲಿ ಡ್ಯುಯೆಟ್‌ ಸಾಂಗ್‌ ಶುರುವಾಗುವುದು ಹೀಗೆ-
ಗಿಡಮರಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ?
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ?
ಇಂಥಾ ರೂಪಕಗಳೆಲ್ಲಾ ಭಟ್ಟರಿಗೆ ಲೀಲಾಜಾಲವಾಗಿ ಹೊಳೆಯುತ್ತವೆ ಅನ್ನೋದು ಭಟ್ಟರ ಹಾಡು ಕೇಳುವವರಿಗೆಲ್ಲಾ ಗೊತ್ತು. ಅದರಲ್ಲೂ ಅವರ ಪೊರ್ಕಿ ಹಾಡುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈ ಸಲ ಶರಣ್‌ ಭಟ್ಟರ ಪೊರ್ಕಿ ಹಾಡಿಗೆ ದನಿಯಾಗಿದ್ದಾರೆ.

ಕ್ಲಾಸಿಕಲ್‌ ಹಾಡುಗಳ ಸಹವಾಸ ಬಲ್ಲ ಶರಣ್‌ ಆ ಪೊರ್ಕಿ ಹಾಡಿಗೆ ಬೇರೆ ಆಯಾಮವನ್ನೇ ಒದಗಿಸುವುದು ಈ
ಹಾಡಿನ ಸ್ಪೆಷಾಲಿಟಿ.

ಹಾಲು ಕುಡಿದ ಮಕ್ಕಳೇ ಬದುಕಲ್ಲ
ಇನ್ನು ಎಣ್ಣೆ ಹೊಡೆದವು ಉಳೀತವಾ
ಅಂಥಾ ದೇವದಾಸೇ ಉಳೀಲಿಲ್ಲ
ಇನ್ನು ಬಾರ್‌ ಓನರ್‌ ಉಳೀತಾನಾ

ಭಟ್ಟರು ಕೊನೆಗೆ ಹಾಡೊಂದರಲ್ಲಿ ಜನಗಳನ್ನೇ ದನಗಳನ್ನಾಗಿ ಮಾಡಿದ್ದಾರೆ. ಪರಮಾತ್ಮನನ್ನೇ ಅವರು ದನ
ಕಾಯೋನನ್ನಾಗಿ ಮಾಡಿರುವುದರಿಂದ ಜನರು ಯಾರೂ ಬೇಸರ ಮಾಡಿಕೊಳ್ಳೋ ಹಂಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ
ಈ ಹಾಡುಗಳು ನಿಮ್ಮ ಕಿವಿಯಲ್ಲಿ ನಲಿಯಲಿವೆ. ಒಂದೂವರೆ ತಿಂಗಳ ನಂತರ “ದನ ಕಾಯೋನು’ ನಿಮ್ಮ ಕಣ್ಣ
ಮುಂದೆ ಇರಲಿದ್ದಾನೆ. ಗ್ಯಾಪಲ್ಲಿ ಭಟ್ಟರು ಅವರ ಮತ್ತೂಂದು ಸಿನಿಮಾ “ನನ್ನ ಹೆಸರೇ ಅನುರಾಗಿ’ ಕಡೆಗೆ ಹೋದರೂ
ಅಚ್ಚರಿಯೇನಿಲ.
-ಉದಯವಾಣಿ

Write A Comment