ಮನೋರಂಜನೆ

ಒಲಿಂಪಿಕ್‌ ಪದಕ ನನ್ನ ಮುಂದಿನ ಗುರಿ: ದೀಪಾ

Pinterest LinkedIn Tumblr

Deepaರಿಯೊ ಡಿ ಜನೈರೊ (ಪಿಟಿಐ): ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಮೊದಲ ಮಹಿಳಾ ಜಿಮ್ನ್ಯಾಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಾ ಕರ್ಮಾಕರ್, ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ತಮ್ಮ ಮುಂದಿನ ಗುರಿ ಎಂದಿದ್ದಾರೆ.
22 ವರ್ಷದ ತ್ರಿಪುರಾದ ಯುವತಿ ದೀಪಾ, ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಆರ್ಟಿಸ್ಟಿಕ್ ಜಿಮ್ನ್ಯಾಸ್ಟಿಕ್‌ ವಿಭಾಗದಲ್ಲಿ ಒಟ್ಟು 52.698 ಪಾಯಿಂಟ್‌ಗಳೊಂದಿಗೆ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.
‘ಚಿನ್ನ ಗೆಲ್ಲಲ್ಲು ಸಾಧ್ಯವಾಗಿದ್ದು ಖುಷಿ ತಂದಿದೆ’ ಎಂದು ದೀಪಾ ಅವರು ಹೇಳಿರುವುದಾಗಿ ಅಂತರರಾಷ್ಟ್ರೀಯ ಜಿಮ್ನ್ಯಾಸ್ಟಿಕ್ಸ್‌ ಫೆಡರೇಷನ್‌ ತನ್ನ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದೆ.
‘ಒಲಿಂಪಿಕ್ ಪದಕ ಗೆಲ್ಲುವುದು ನನ್ನ ಮುಂದಿನ ಗುರಿ’ ಎಂದು ಅವರು ವಾಲ್ಟ್ಸ್ ವಿಭಾಗದಲ್ಲಿ ಚಿನ್ನ ಜಯಿಸಿದ ಬಳಿಕ ಅವರು ನುಡಿದಿದ್ದಾರೆ.

Write A Comment