ಭಾರತ ಕ್ರಿಕೆಟ್ ತಂಡದ ದಿಟ್ಟ ಬ್ಯಾಟ್ಸ್‌ಮನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ನ ಚೆಲುವೆ ಅನುಷ್ಕಾ ಶರ್ಮಾ ಈ ವರ್ಷಾಂತ್ಯ ಮದುವೆ ಆಗಲಿದ್ದಾರೆ ಎಂದು ಇಲ್ಲಿನ ಪ್ರಮುಖ ದೈನಿಕವೊಂದು ವರದಿ ಮಾಡಿದೆ.
ವಿರಾಟ್ ಕೊಹ್ಲಿ ಅವರು ಅನುಷ್ಕಾ ನಟನೆಯ ಎನ್‌ಎಚ್ 10 ಸಿನೇಮಾ ನೋಡಿ ಆಕೆಯನ್ನು ಟ್ವಿಟರ್‌ನಲ್ಲಿ ಬಹುವಾಗಿ ಪ್ರಶಂಸಿಸಿರುವ ಬೆನ್ನಿಗೇ ಆಕೆಯಿಂದ ಕೂಡಲೇ ಧನ್ಯವಾದ ಸಮರ್ಪಣೆಯೂ ಆಗಿದೆ. ಈ ಒಟ್ಟು ವಿದ್ಯಮಾನದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಈ ವರ್ಷಾಂತ್ಯ ಮದುವೆಯಾಗಲಿದ್ದಾರೆ ಎಂಬ ವದಂತಿಗಳೂ ಬಲವಾಗಿ ಕೇಳಿ ಬಂದಿವೆ. ಇದರ ಬೆನ್ನು ಹಿಡಿದ ದಿಲ್ಲಿಯ ಪ್ರಮುಖ ಪತ್ರಿಕೆಯು ವದಂತಿಯ ಹಿಂದಿನ “ಸತ್ಯಾಂಶ’ವನ್ನು ಬಯಲಿಗೆಳೆದು ಮದುವೆ ಸಂಭಾವ್ಯತೆಯನ್ನು ಸುದ್ದಿ ಮಾಡಿದೆ !
ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯ ಮತ್ತು ನ್ಯೂಝೀಲಂಡ್‌ನಲ್ಲಿ ವಿರಾಟ್ ಕೊಹ್ಲಿ ಜತೆಗೆ ಅನುಷ್ಕಾ ಶರ್ಮಾ ಕನಿಷ್ಠ ಒಂದಕ್ಕಿಂತ ಹೆಚ್ಚು ಬಾರಿ ಜತೆಯಾಗಿ ಕಾಣಿಸಿಕೊಂಡಿರುವುದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.
ಇದೀಗ ಹೊಸ ವಿದ್ಯಮಾನವೊಂದರಲ್ಲಿ ಐಸಿಸಿ ವಕ್ತಾರರೋರ್ವರು ವಿರಾಟ್ – ಅನುಷ್ಕಾ ವಿವಾಹವಾಗುವ ಸಾಧ್ಯತೆಗಳ ಬಗ್ಗೆ ಬಾಯಿ ಬಿಟ್ಟಿರುವುದು ಕೂಡ ವದಂತಿಗಳಿಗೆ ಪುಷ್ಟಿ ನೀಡಿದೆ.