Entertainment

ಗುದ್ದೋಡು ಪ್ರಕರಣ: ಸಲ್ಮಾನ್ ವಾದಕ್ಕೆ ತಿರುಗೇಟು

Pinterest LinkedIn Tumblr

salman-khan_640x480_61427453368

ಮುಂಬಯಿ: ಬಾಂದ್ರಾ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿ ವ್ಯಕ್ತಿಯ ಸಾವಿಗೆ ಕಾರಣವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಆಗ ಚಾಲಕ ಅಶೋಕ್ ಸಿಂಗ್ ಚಾಲನೆ ಮಾಡುತ್ತಿದ್ದ ಎಂಬ ನಟ ಸಲ್ಮಾನ್‌ಖಾನ್ ಅವರ ವಾದವನ್ನು ಒಪ್ಪಲಾಗದು ಎಂದು ಪ್ರಾಸಿಕ್ಯೂಷನ್ ಬುಧವಾರ ಬಲವಾಗಿ ವಾದಿಸಿದೆ.

ಸೆಷನ್ಸ್ ಕೋರ್ಟ್‌ನಲ್ಲಿ ಸೋಮವಾರ ಅಂತಿಮ ವಾದ-ವಿವಾದ ನಡೆಯುತ್ತಿರಬೇಕಾದರೆ 2002ರ ಅಪಘಾತದಲ್ಲಿ ತಾನು ಕಾರು ಚಾಲನೆ ಮಾಡುತ್ತಿರಲಿಲ್ಲ, ಚಾಲಕ ಅಶೋಕ್ ಸಿಂಗ್ ಆ ಸೀಟ್‌ನಲ್ಲಿದ್ದ ಎಂದು ಸಲ್ಮಾನ್ ಮೊದಲ ಬಾರಿ ಹೇಳಿದ್ದರು. ”ಇಡೀ ವಿಚಾರಣೆಯಲ್ಲಿ ಅಶೋಕ್ ಸಿಂಗ್ ಅವರ ಪ್ರಸ್ತಾಪ ಮೊದಲಬಾರಿಗೆ ಕೇಳಿ ಬಂದಿದೆ. ಅವರು ‘ಕರೆದುಕೊಂಡು ಬಂದ ಸಾಕ್ಷ್ಯ’ ದಂತೆ ಕಾಣುತ್ತಾರೆ.ಎಂದು ಸರಕಾರಿ ವಕೀಲರಾದ ಪ್ರದೀಪ್ ಘರಾಟ್,” ಹೇಳಿದರು.

ಯಾವುದೇ ಸಾಕ್ಷಿ ಕೂಡ ಈವರೆಗೆ ಇಂಥ ಮಾಹಿತಿ ನೀಡಿಲ್ಲ. ಖಾನ್ ಅವರಿಂದ ಮಾತ್ರ ಹೊಸ ಹೇಳಿಕೆ ಪ್ರಕಟವಾಗಿದೆಎಂದು ಅವರು ಹೇಳಿದರು.

ಸಲ್ಮಾನ್ ಭದ್ರತಾ ಸಿಬ್ಬಂದಿಯಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ರವೀಂದ್ರ ಪಾಟೀಲ್ ಆ ಸಂದರ್ಭದಲ್ಲಿ ತಾನು, ಸಲ್ಮಾನ್ ಮತ್ತು ಅವರ ಸ್ನೇಹಿತ ಕಮಲ್ ಕಾರಿನಲ್ಲಿ ಇದ್ದೆವು ಎಂದು ಹೇಳಿದ್ದರೇ ಹೊರತು ಅಶೋಕ್ ಸಿಂಗ್ ಇದ್ದರೆಂಬ ಮಾಹಿತಿ ನೀಡಿರಲಿಲ್ಲ ಅಪಘಾತ ಸಂದರ್ಭದಲ್ಲಿ ಸಲ್ಮಾನ್ ಚಾಲನಾ ಪರವಾನಗಿ ಹೊಂದಿರಲಿಲ್ಲ ಮತ್ತು ಮದ್ಯಪಾನ ಮಾಡಿದ್ದರು ಎಂಬ ಪ್ರಾಸಿಕ್ಯೂಷನ್ ವಾದವನ್ನು ಖಾನ್ ನಿರಾಕರಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಈವರೆಗೆ 25 ಸಾಕ್ಷಿಗಳ ವಿಚಾರಣೆ ನಡೆಸಿದ್ದರೆ ಆರೋಪಿ ಪರ ವಕೀಲರು ಒಬ್ಬ ಸಾಕ್ಷಿಯ ವಿಚಾರಣೆ ನಡೆಸಿದ್ದಾರೆ.

Write A Comment