ಅಬಧಾಬಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘ ಕಳೆದ ಮೂರು ದಶಕಗಳಿಂದ ಕೊಲ್ಲಿ ನಾಡಿನ ಕನ್ನಡ ಕಲೆ ಭಾಷೆ ಸಂಸ್ಕೃತಿಯನ್ನು ಹಸಿರಾಗಿರಿಸಿದೆ. ಈ ವರ್ಷದಿಂದ ನೂತನವಾಗಿ ಕನ್ನಡದ ವರಕವಿ ದಾ. ರಾ. ಬೇಂದ್ರೆಯವರ ೧೧೬ ನೇ ಜನ್ಮ ವರ್ಷಾಚರಣೆಯ ಸವಿನೆನಪಿನಲ್ಲಿ ಪ್ರಾರಂಭಿಸಲಾಗುವ ” ಡಾ. ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಪ್ರಥಮ ಬಾರಿಗೆ ಕೊಲ್ಲಿನಾಡಿನಲ್ಲಿ ಕಳೆದ ಮೂರು ದಶಕಗಳಿಂದ ಕನ್ನಡ ಸೇವೆಯನ್ನು ಮಾಡಿರುವ ಹಿರಿಯರಾದ ಶ್ರೀ ಬಿ. ಜಿ. ಮೋಹನ್ ದಾಸ್ ರವರಿಗೆ ನೀಡಿ ಗೌರವಿಸಲಾಗುವುದು ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಅದ್ದೂರಿಯ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ…
ಡಾ. ಬಿ. ಆರ್. ಶೆಟ್ಟಿಯವರು ಮಹಾಪೋಷಕರಾಗಿರುವ ಅಬುಧಾಬಿ ಕರ್ನಾಟಕ ಸಂಘದ ಉತ್ಸಾಹಿ ಕಾರ್ಯಕಾರಿ ಸಮಿತಿಯು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ 2012 ನವೆಂಬರ್ 2 ನೇ ತಾರೀಕು ಶುಕ್ರವಾರ ಸಹಸ್ರಾರು ಕನ್ನಡಿಗರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಸಲಾಗುತ್ತದೆ.
ಅನಿವಾಸಿ ಕನ್ನಡಿಗರ ಅಚ್ಚುಮೆಚ್ಚಿನ “ಬೀಜಿ”
ಶ್ರೀಯುತ ಬಿ. ಜಿ. ಮೋಹನ್ ದಾಸ್ ಕಳೆದ ಮೂರು ದಶಕಗಳಿಂದ ಕೊಲ್ಲಿನಾಡಿನ ಕನ್ನಡಿಗರ ಆತ್ಮೀಯ ಸ್ನೇಹಿತರಾಗಿ, “ಬೀಜಿ” ಎಂದೇ ಪರಿಚಿತ ವ್ಯಕ್ತಿತ್ವ. ದುಬಾಯಿ ಕರ್ನಾಟಕ ಸಂಘದ ಸ್ಥಾಪಕ ಸದಸ್ಯರಾಗಿ ೧೯೮೯ ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಲ್ಲಿನಾಡಿನಲ್ಲಿ ಕನ್ನಡ ಕಲೆ, ಭಾಷೆ ಸಂಸ್ಕೃತಿಯ ವೈಭವೀಕರಣದಲ್ಲಿ ಬೀಜಿಯವರ ಕೊಡುಗೆ ಅಪಾರವಾಗಿದೆ. ಇಂಡಿಯನ್ ಫಾರ್ಮಾಸ್ಯೂಟಿಕಲ್ ಫೋರಂ ನ ಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಗಲ್ಫ್ ಕನ್ನಡಿಗ ವೆಬ್ ಮಾಧ್ಯಮದ ಪ್ರಧಾನ ಸಂಪಾದಕರಾಗಿ ಕೊಲ್ಲಿನಾಡಿನಿಂದ ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ದಿನನಿತ್ಯ ಮುಟ್ಟಿಸುವುದರ ಮೂಲಕ ಕನ್ನಡ ಸೇವೆಯನ್ನು ಮಾಡುತಿದ್ದಾರೆ.
ಸಾರ್ಥಕತೆಯ ಸೇವೆಗೆ ಸಂದ ಗೌರವ ಪ್ರಶಸ್ತಿಗಳು
ಮಣಿಪಾಲ್ ಯೂನಿವರ್ಸಿಟಿಯಿಂದ ಔಟ್ ಸ್ಟ್ಯಾಂಡಿಂಗ್ ಅಲುಮಿನಿ, ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಟಿತ “ಮಯೂರ ಪ್ರಶಸ್ತಿ” (2007), ಸನ್ಮಾನ – ಕನ್ನಡ ಸಂಘ ಬಹೆರಿನ್ (2008), ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ 2ನೇ ವಿಶ್ವಕನ್ನಡ ಸಮ್ಮೇಳನ-2012 ರ “ವಿಶ್ವಮಾನವ ಅಂತರಾಷ್ಟ್ರೀಯ” ಪ್ರಶಸ್ತಿ ಪಡೆದಿದ್ದಾರೆ.
ಕನ್ನಡ ಕುಲಕೋಟಿ ಎಂದೆಂದಿಗೂ ಮರೆಯಲಾರದ ಜ್ಞಾನಪೀಠ ಪ್ರಶಸ್ತಿಯ ಗೌರವದ ಸ್ಥಾನವನ್ನು ಕನ್ನಡಿಗರಿಗೆ ಮನನ ಮಾಡಿಕೊಟ್ಟಿರುವ ವರಕವಿ ಡಾ. ದ. ರಾ. ಬೇಂದ್ರೆಯವರ ಹೆಸರಿನಲ್ಲಿ ಪ್ರತಿಷ್ಠಿತ ” ಡಾ. ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಪಡೆಯಲಿರುವ ಆತ್ಮೀಯ ಬೀಜಿಯವರಿಗೆ ಈ ಶುಭ ಸಂದರ್ಭದಲ್ಲಿ ಸಮಸ್ಥ ಕನ್ನಡಿಗರ ಪರವಾಗಿ ಹಾರ್ಧಿಕ ಅಭಿನಂದನೆಗಳು.
ಪ್ರಶಸ್ತಿ -ಗೌರವ :
“ವಿಶ್ವಮಾನವ ಅಂತರಾಷ್ಟ್ರೀಯ” ಪ್ರಶಸ್ತಿ -2012
ಅಬುಧಾಬಿ ಕರ್ನಾಟಕ ಸಂಘ: – 2009
ಸನ್ಮಾನ – ಕನ್ನಡ ಸಂಘ ಬಹೆರಿನ್ -2008
“ಮಯೂರ ಪ್ರಶಸ್ತಿ” (2007),
ಔಟ್ ಸ್ಟ್ಯಾಂಡಿಂಗ್ ಅಲುಮಿನಿ-2002