ಆರೋಗ್ಯ

ಹಳೇ ಸೌಂದರ್ಯಕ್ಕೆ 15 ನಿಮಿಷದಲ್ಲಿ ಹೊಸ ಮೆರಗು.

Pinterest LinkedIn Tumblr

Aged_face_young

ಮನುಷ್ಯ ತನ್ನ ಸೌಂದರ್ಯ ಮರೆ ಮಾಚಲು ನೀವು ಎಷ್ಟು ಮೇಕಪ್ ಮಾಡಿದರು ಸಹ ಅದರಿಂದ ಯಾವುದೇ ಪ್ರಯೋಜನ ಬರುವುದಿಲ್ಲ. ಅದಕ್ಕಾಗಿ ಇರುವ ಒಂದೇ ಒಂದು ಮಾರ್ಗವೆಂದರೆ ಅದಕ್ಕೆ ಆಂತರಿಕವಾಗಿ ಪೋಷಣೆ ಒದಗಿಸುವುದು. ತ್ವಚೆಯನ್ನು ಆಂತರಿಕವಾಗಿ ಆರೋಗ್ಯಯುತವಾಗಿ ಮಾಡಿದರೆ ಅದರಿಂದ ನಿಮ್ಮ ಸೌಂದರ್ಯ ಮತ್ತೆ ಇಮ್ಮಡಿಗೊಳ್ಳುತ್ತದೆ. ಈ ಆಂತರಿಕ ಪೋಷಣೆಯು ನಿಮ್ಮ ತ್ವಚೆಯಲ್ಲಿ ವಯಸ್ಸನ್ನು ಕಾಣುವಂತೆ ಮಾಡುವ ಎಲ್ಲಾ ಅಂಶಗಳನ್ನು ಮರೆ ಮಾಡುತ್ತದೆ. ಅದಕ್ಕಾಗಿ ನಿಮಗೆ ಇಂದು ನಾವು ಎರಡು ವಯಸ್ಸು ನಿರೋಧಕ ಫೇಸ್ ಮಾಸ್ಕ್‌ಗಳ ಕುರಿತು ತಿಳಿಸಿಕೊಡುತ್ತೇವೆ ಇದು ನಿಮ್ಮ ವಯಸ್ಸಿಗಿಂತ 10 ವರ್ಷ ಕಡಿಮೆ ವಯಸ್ಸಿನ ತ್ವಚೆಯ ಸೌಂದರ್ಯವನ್ನು ನೀಡುತ್ತದೆ. ಜೊತೆಗೆ ತ್ವಚೆಗೆ ಹಿಗ್ಗುವಿಕೆ, ತೇವಾಂಶ, ಆರೈಕೆ ಮತ್ತು ಹೊಳಪನ್ನು ಸಹ ಈ ಮಾಸ್ಕ್‌ಗಳು ನೀಡುತ್ತವೆ.

ಮಾಸ್ಕ್ 1 ಅಗತ್ಯವಾದ ಪದಾರ್ಥಗಳು:
3 ಟೇಬಲ್ಅಕ್ಕಿ, 1 ಟೇಬಲ್ ಚಮಚ ಹಾಲು, 1 ಟೇಬಲ್ ಚಮಚ ಜೇನು ತುಪ್ಪ ಮತ್ತು 1 ಕಪ್ ನೀರು : ತಯಾರಿಸುವ ವಿಧಾನ: ಮಧ್ಯಮ ಗಾತ್ರದ ಉರಿಯಲ್ಲಿ ಒಂದು ಕಪ್ ಬಟ್ಟಲಿನಲ್ಲಿರುವ ನೀರಿಗೆ ಅಕ್ಕಿಯನ್ನು ಹಾಕಿ ಬೇಯಿಸಿಕೊಳ್ಳಿ. ನಂತರ ನೀರನ್ನು ಬಟ್ಟಲಿನಿಂದ ಬಸಿಯಿರಿ. ಜೇನು ತುಪ್ಪ ಮತ್ತು ಹಾಲನ್ನು ಕಪ್‌ಗೆ ಸೇರಿಸಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಂಡು 15-20 ನಿಮಿಷ ಬಿಡಿ. ಇದನ್ನು ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಒಮ್ಮೆ ಮಾಡಿದರೆ ನಿಮ್ಮ ತ್ವಚೆಗೆ 10 ವರ್ಷದ ಹಿಂದಿನ ಸೌಂದರ್ಯ ಮರಳಿ ಬರುತ್ತದೆ.

ಮಾಸ್ಕ್ 2 ಅಗತ್ಯವಾದ ಪದಾರ್ಥಗಳು:
1 ಮೊಟ್ಟೆಯ ಬಿಳಿ ಭಾಗ ,1 ಟೇಬಲ್ ಚಮಚ ದ್ರಾಕ್ಷಿ ರಸ, 1 ಟೇಬಲ್ ಚಮಚ ಲಿಂಬೆರಸ, 2 ಟೇಬಲ್ ಚಮಚ ಹಾಲಿನ ಕೆನೆ ತಯಾರಿಸುವ ವಿಧಾನ ಮೊಟ್ಟೆಯ ಬಿಳಿ ಭಾಗವನ್ನು ಬಟ್ಟಲಿನಲ್ಲಿ ಹಾಕಿಕೊಂಡು ಅದಕ್ಕೆ ಹಾಲಿನ ಕೆನೆಯನ್ನು, ದ್ರಾಕ್ಷಿ ರಸವನ್ನು ಮತ್ತು ಲಿಂಬೆರಸವನ್ನು ಬೆರೆಸಿಕೊಳ್ಳಿ. ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿಕೊಂಡು ಫೇಸ್ ಮಾಸ್ಕ್ ನಂತೆ ಮಾಡಿಕೊಂಡು, ನಿಮ್ಮ ತ್ವಚೆಗೆ ಲೇಪಿಸಿ 15 ನಿಮಿಷ ಬಿಡಿ. ನಂತರ ಅದನ್ನು ತೊಳೆಯಿರಿ.

ಇದು ನಿಮ್ಮ ತ್ವಚೆಯಲ್ಲಿ ವಯಸ್ಸಾದಂತೆ ಕಾಣುವ ಅಂಶಗಳನ್ನು ಮರೆ ಮಾಚುವ ಗುಣಗಳನ್ನು ನೀಡುತ್ತದೆ. ಏಕೆಂದರೆ ಈ ಮಾಸ್ಕ್ ನಿಮ್ಮ ಮುಖಕ್ಕೆ ಅಗತ್ಯವಾದ ಆಂಟಿಆಕ್ಸಿಡೆಂಟ್‌ಗಳನ್ನು ಮತ್ತು ವಿಟಮಿನ್‌ಗಳನ್ನು ಒದಗಿಸುತ್ತದೆ. ಇದರಿಂದ ನೀವು ಹೊಳಪಿನಿಂದ ಕೂಡಿದ, ಯೌವನಭರಿತವಾದ ತ್ವಚೆಯನ್ನು ಪಡೆಯುವಿರಿ. ಈ ಮಾಸ್ಕ್‌ಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು

Write A Comment