India

ಒಂದೂವರೆ ಲಕ್ಷ ವರ್ಷಗಳಿಗಿಂತಲೂ ಪುರಾತನವಾದ ಸೂರ್ಯಮಂದಿರ… –  ಪುರಾಣ ಮತ್ತು ಚರಿತ್ರೆಯ ಸತ್ಯ ಸಂಗತಿ

Pinterest LinkedIn Tumblr

surya_temple_aurnbad_1

ಒಂದೂವರೆ ಲಕ್ಷ ವರ್ಷಗಳಿಗಿಂತಲೂ ಪುರಾತನವಾದ ಸೂರ್ಯಮಂದಿರ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿನ ದೇವ್ ಎಂಬ ಪ್ರದೇಶದಲ್ಲಿ ಸೂರ್ಯಮಂದಿರವೊಂದು ತ್ರೇತಾಯುಗದ ಕಾಲದಲ್ಲೇ ನಿರ್ಮಿತವಾಗಿದೆ. ತ್ರೇತಾಯುಗ ಆರಂಭವಾಗಿ 12 ಲಕ್ಷ 16 ಸಾವಿರ ವರ್ಷ ಕಳೆದು ಹೋದ ಮೇಲೆ , ಇಳಾಪುತ್ರನಾದ ರಾಜ ಪುರೂರವ ಐಲ್ ನ ಇಚ್ಛೆಯಂತೇ , ದೇವಶಿಲ್ಪಿ ವಿಶ್ವಕರ್ಮ ಈ ದೇವಸ್ಥಾನವನ್ನು ನಿರ್ಮಿಸಿದ್ದ ದೇವಸ್ಥಾನದ ಶಿಲಾಲೇಖದ ಆಧಾರದಿಂದ ತಿಳಿಯುವ ವಿಷಯ – ಈ ದೇವಸ್ಥಾನವನ್ನು ಕಟ್ಟಿ ಇಂದಿಗೆ 2014 ಕ್ಕೆ , 1 ಲಕ್ಷದ 64  ಸಾವಿರ ವರ್ಷಗಳು ಉರುಳಿಹೋಗಿವೆ.

ಈ ದೇವಸ್ಥಾನದ ಸೌಂದರ್ಯ ಅಪ್ರತಿಮ , ಅನುಪಮ, ಇಂದಿಗೂ ವಿಜ್ಞಾನಿಗಳಿಗೆ , ಸಂಶೋಧಕರಿಗೆ ಅಚ್ಚರಿಯ ವಿಷಯ. ಭಕ್ತರಿಗೆ , ಶಿಲ್ಪಿಗಳಿಗೆ ಶ್ರದ್ಧಾಕೇಂದ್ರ.. ಸೂರ್ಯ ಪುರಾಣದ ಪ್ರಕಾರ ಈ ಮಂದಿರ ನಿರ್ಮಾಣ ವಿಷಯದಲ್ಲಿ ಕಥೆಯೊಂದಿದೆ..

ದೇವ್ ಪ್ರದೇಶದ ರಾಜ , ಪುರೂರವ ಐಲ್ ಶ್ವೇತ ಕುಷ್ಠರೋಗದಿಂದ ಪೀಡಿತನಾಗಿದ್ದ, ಆದರೂ ಆತನಿಗೆ ಬೇಟೆಯಾಡುವ ಚಟ. ಒಂದು ಸಲ ಬೇಟೆಯಾಡಲು ಕಾಡಿಗೆ ಹೋದಾಗ ತನ್ನ ದಾರಿಯನ್ನು ಕಳೆದುಕೊಂಡ..ದಾರಿಯನ್ನು ಹುಡುಕುತ್ತಾ ಹುಡುಕುತ್ತಾ ಕಾಡಿನಲ್ಲೇ ಅಲೆದಾಡಿದ..ದಣಿವು , ಬಾಯಾರಿಕೆಯಾಯಿತು, ನೀರನ್ನು ಹುಡುಕುತ್ತಾ ಹೊರಟ ಅವನಿಗೆ ಸರೋವರವೊಂದು ಕಾಣಿಸಿತು..ಅಲ್ಲಿನ ನೀರು ಶುಭ್ರವಾಗಿತ್ತು..ರಾಜ ಸಂತಸದಿಂದ ಬೊಗಸೆಯಲ್ಲಿ ನೀರನ್ನು ಕುಡಿಯಲು ಆರಂಭಿಸುತ್ತಾನೆ..ಏನಾಶ್ಚರ್ಯ…!ನೀರು ತಾಗುತ್ತಿದ್ದಂತೇ ಆತನ ಕುಷ್ಠರೋಗದ ಹುಣ್ಣುಗಳು ವಾಸಿಯಾಗಿದ್ದವು..ಆಶ್ಚರ್ಯಚಕಿತನಾದ ರಾಜ , ಪೂರ್ತಿ ಶರೀರ ನೀರಿನಲ್ಲಿ ಮುಳುಗುವಂತೇ ನಡೆದುಹೋದ..ನೀರಿನ ಔಷಧೀಯ ಗುಣಗಳಿಂದ ಆತನ ಕುಷ್ಠರೋಗ ಮಾಯವಾಗಿತ್ತು..ಕುಷ್ಠರೋಗದಿಂದ ಆತ ಗುಣಮುಖನಾಗಿದ್ದ.

ಸಂತಸಗೊಂಡ ರಾಜ ಅಲ್ಲಿಯೇ ನಿದ್ರೆಗೆ ಶರಣಾದ..ಕನಸಿನಲ್ಲಿ ಸಾಕ್ಷಾತ್ ಸೂರ್ಯದೇವನೇ ಪ್ರತ್ಯಕ್ಷನಾಗಿ , ಈ ಸರೋವರದ ಕೆಳಗಡೆ ಸೂರ್ಯನ ಮೂರ್ತಿಯಿದೆ..ಅದನ್ನು ಹೊರತೆಗೆದು ಮಂದಿರದಲ್ಲಿ ಪ್ರತಿಷ್ಠಾಪಿಸು ಎಂಬ ಆಜ್ಞೆಯನ್ನಿತ್ತಿದ್ದ..ರಾಜ ಆಮೇಲೆ ಮೂರ್ತಿಯನ್ನು ನೀರಿನಿಂದ ತೆಗೆದು ಸೂರ್ಯನ ದೇವಸ್ಥಾನವನ್ನು ನಿರ್ಮಿಸಿದ..ಇದೇ ಈ ಸೂರ್ಯಮಂದಿರ.

surya_temple_aurnbad_3 surya_temple_aurnbad_2

ವಿಶ್ವದಲ್ಲೇ ಪಶ್ಚಿಮಾಭಿಮುಖವಾಗಿರುವ ಏಕೈಕ ಮಂದಿರ ಈ ಸೂರ್ಯಮಂದಿರ: 

ಕಾರಣ..??ಅದಕ್ಕೂ ಒಂದು ಕಥೆಯನ್ನು ಸ್ಥಳೀಯರು ಹೇಳುತ್ತಾರೆ..ಒಂದು ಬಾರಿ ಬಾರ್ಬರ್ ಲುಟೇರ ಎಂಬ ರಾಜ ಎಲ್ಲಾ ದೇವಸ್ಥಾನಗಳನ್ನು ದೋಚುತ್ತಾ , ಅಲ್ಲಿಯ ಮೂರ್ತಿಗಳನ್ನು ನಾಶ ಮಾಡುತ್ತಾ ಈ ದೇವಾಲಯಕ್ಕೂ ಬಂದಿದ್ದ..ಆಗ ಈ ದೇವಾಲಯದ ಪುರೋಹಿತರು ಅವನಲ್ಲಿ ದೇವಸ್ಥಾನವನ್ನು ಧ್ವಂಸ ಮಾಡದಂತೇ ವಿನಂತಿಸಿಕೊಂಡರು..ಈ ದೇವರಿಗೆ ಬಹಳ ಶಕ್ತಿಯಿದೆಯೆಂದರು..ಅದಕ್ಕೆ ಆತ , ನಿಮ್ಮ ದೇವರಲ್ಲಿ ನಿಜವಾಗಲೂ ಶಕ್ತಿಯಿದ್ದರೆ ಪೂರ್ವಾಭಿಮುಖ ವಾಗಿರುವ ಈ ದೇವಾಲಯ ನಾಳೆ ಬೆಳಿಗ್ಗೆ ಪಶ್ಚಿಮಾಭಿಮುಖವಾಗಲಿ ನೋಡೋಣ..ಆಗ ನಿಮ್ಮ ದೇವರ ಶಕ್ತಿಯನ್ನು ಒಪ್ಪಿಕೊಳ್ಳುತ್ತೇನೆ..ದೇವಸ್ಥಾನವನ್ನು ನಾಶ ಮಾಡದೇ ಬಿಡುತ್ತೇನೆ ಎಂಬ ಶರತ್ತನ್ನು ವಿಧಿಸಿದ..ಪುರೋಹಿತರು ಆಗಲಿ ಎಂದು ಒಪ್ಪಿಕೊಂಡರು…

ರಾತ್ರಿ ದೇವಸ್ಥಾನದಲ್ಲಿ ಪೂಜೆ ಹವನಗಳು ಜೋರಾಗಿಯೇ ನಡೆದವು..ಭಕ್ತರು , ಪುರೋಹಿತರು ಸೂರ್ಯದೇವನನ್ನು ಪರಿ ಪರಿಯಾಗಿ ಪ್ರಾರ್ಥಿಸಿದರು..ಪೂಜೆ ಕಾರ್ಯಗಳು ಮುಗಿಯುತ್ತಿದ್ದಂತೇ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು..

ಬೆಳಿಗ್ಗೆ ಬಾರ್ಬರ್ ಬರುತ್ತಾನೆ.. ಏನಾಶ್ಚರ್ಯ..ಪೂರ್ವಾಭಿಮುಖವಾಗಿದ್ದ ದೇವಾಲಯ ಪಶ್ಚಿಮಾಭಿಮುಖವಾಗಿದೆ. ಕೊನೆಗೂ ಬಾರ್ಬರ್ ಸೋತುಬಿಟ್ಟ..ದೇವರ ಮುಂದೆ ಅವನಾಟ ನಡೆಯಲೇ ಇಲ್ಲ..ದೇವಾಲಯವನ್ನು ನಾಶ ಮಾಡದೇ ಅಲ್ಲಿಂದ ತೆರಳಿದ..!!

ಎಲ್ಲ ಸೂರ್ಯನ ದೇವಾಲಯಗಳೂ ಪೂರ್ವಾಭಿಮುಖವಾಗಿದ್ದರೆ , ಈ ದೇವಾಲಯ ಮಾತ್ರ ಪಶ್ಚಿಮಾಭಿಮುಖವಾಗಿದೆ..!!ಸುಮಾರು ನೂರಡಿಗಿಂತಲೂ ಎತ್ತರವಿರುವ ಈ ದೇವಾಲಯ ವಾಸ್ತುಕಲೆಗೆ ಉತ್ತಮ ಉದಾಹರಣೆಯಾಗಿದೆ..ದೇವಸ್ಥಾನವನ್ನು ಕಟ್ಟುವಾಗ ಸಿಮೆಂಟ್ , ಸುಣ್ಣ ಯಾವುದನ್ನೂ ಬಳಸಿಲ್ಲ..ಕೇವಲ ಶಿಲೆಯಿಂದ ನಿರ್ಮಿತವಾಗಿದೆ. ದೇವಶಿಲ್ಪಿ ವಿಶ್ವಕರ್ಮ ಈ ದೇವಸ್ಥಾನವನ್ನು ಒಂದೇ ರಾತ್ರಿಯಲ್ಲಿ ಕಟ್ಟಿದ್ದ. ಅದೂ ಸಂಪೂರ್ಣ ಕಪ್ಪುಕಲ್ಲಿನಿಂದ.

ಈ ದೇವಸ್ಥಾನಕ್ಕೆ ಪ್ರತಿವರ್ಷ ಚೈತ್ರ ಮತ್ತು ಕಾರ್ತಿಕ ಮಾಸದಲ್ಲಿ ಲಕ್ಷಾಂತರ ಭಕ್ತರು ಬೇಟಿ ನೀಡುತ್ತಾರೆ..ತಮ್ಮ ಮನೋವಾಂಛೆಯನ್ನು ಕೇಳಿಕೊಳ್ಳುತ್ತಾರೆ..ಸೂರ್ಯದೇವ ಅವರೆಲ್ಲಾ ಅಭೀಷ್ಟಗಳನ್ನು ನೆರವೇರಿಸುತ್ತಾನೆ..

Write A Comment