India

ನಿಮ್ಮ ಮೊಬೈಲ್ ಕಳೆದುಹೋದರೆ ಅದನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಬೇಕೇ……?

Pinterest LinkedIn Tumblr

mobil_trsck_tencnic

ನಾವು ಎಷ್ಟೇ ಹುಷಾರಾಗಿದ್ದರೂ ಕೆಲವೊಮ್ಮೆ ಮೊಬೈಲ್’ಗಳು ಕಳುವಾಗಿಬಿಡುತ್ತವೆ. ಅಥವಾ ಕಳೆದುಕೊಂಡುಬಿಡುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೇ ಹತಾಶರಾಗುತ್ತೇವೆ. ಪೊಲೀಸ್’ಗೆ ದೂರು ಕೊಟ್ಟರೆ ಮೊಬೈಲನ್ನು ಹುಡುಕಿಕೊಡುವ ಗ್ಯಾರಂಟಿ ಇರುವುದಿಲ್ಲ. ಆದರೆ, ನಿಮ್ಮ ಮೊಬೈಲನ್ನು ಒಂದೇ ದಿನದಲ್ಲಿ ಹುಡುಕಲು ಸಾಧ್ಯವಿದೆ. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.

ನಿಮ್ಮ ಮೊಬೈಲ್’ನಲ್ಲಿ ಐಎಂಇಐ ಎಂಬ ವಿಶೇಷ ನಂಬರ್ ಇರುತ್ತದೆ. ಈ ಇಂಟರ್’ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರನ್ನು ಮೊದಲು ಗುರುತು ಮಾಡಿಟ್ಟುಕೊಂಡಿರಿ. ಇದು ಬಹಳ ಮುಖ್ಯ. ಈ ನಂಬರನ್ನು ಪಡೆಯಲು ನಿಮ್ಮ ಮೊಬೈಲ್’ನಿಂದ *#06# ಅನ್ನು ಡಯಲ್ ಮಾಡಿದರೆ ನಿಮಗೆ 15 ಅಕ್ಷರದ ಐಎಂಇಐ ನಂಬರ್ ಸಿಗುತ್ತದೆ. ಇದನ್ನು ನಿಮ್ಮ ಡೈರಿಯಲ್ಲಿ ಗುರುತು ಮಾಡಿಟ್ಟುಕೊಳ್ಳಿ.

ಅಕಸ್ಮಾತ್ ನಿಮ್ಮ ಮೊಬೈಲ್ ಕಳುವಾದಾಗ ಈ ಕೆಳಗಿನ ವಿವರಗಳೊಂದಿಗೆ copy@vsnl.net ಎಂಬ ವಿಳಾಸಕ್ಕೆ ಇ-ಮೇಲ್ ಮಾಡಿ.

ನಿಮ್ಮ ಹೆಸರು:
ವಿಳಾಸ:
ಫೋನ್ ಮಾಡೆಲ್:
ಮೇಕ್:
ಕೊನೆಯ ಬಾರಿ ಬಳಸಿದ ನಂಬರ್:
ನಿಮ್ಮ ಇಮೇಲ್ ವಿಳಾಸ:
ನಾಪತ್ತೆಯಾದ ದಿನಾಂಕ:
ಐಎಂಇಐ ನಂಬರ್:

ಮುಂದಿನ 24 ಗಂಟೆಯೊಳಗೆ ನಿಮ್ಮ ಮೊಬೈಲನ್ನು ಟ್ರೇಸ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿರುವುದಿಲ್ಲ. ಕಳೆದುಹೋದ ಮೊಬೈಲ್’ನಲ್ಲಿ ನಿಮ್ಮ ಸಿಮ್ ಕಾರ್ಡ್ ಬದಲಾಯಿಸಿದ್ದರೂ ಫೋನ್’ನ ಜಿಪಿಆರ್ಎಸ್ ಮೂಲಕ ಮೊಬೈಲನ್ನು ಪತ್ತೆಹಚ್ಚುವ ತಂತ್ರಜ್ಞಾನ ಇದೆ.

Write A Comment