Karavali

ಕೋಟೇಶ್ವರ: ಮಗಳಿಗೆ ನೇಣು ಹಾಕಿದ ಬಳಿಕ ತಂದೆಯೂ ನೇಣಿಗೆ ಶರಣು: ದಾಂಪತ್ಯ ಕಲಹ ಶಂಕೆ (updated)

Pinterest LinkedIn Tumblr

Koteshwara_Daughtaer_father_suside

ಕುಂದಾಪುರ: ತಂದೆಯೇ ಮಗಳ ಕುತ್ತಿಗೆಗೆ ನೇಣು ಬಿಗಿದು ಆಕೆಯನ್ನು ಕೊಲ್ಲುವ ಮೂಲಕ ತಾನೂ ಇನ್ನೊಂದು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ ವ್ಯಪ್ತಿಯ ದೊಡ್ಡೋಣಿ ಎಂಬಲ್ಲಿ ನಡೆದಿದ್ದು ಮಂಗಳವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ದೊಡ್ಡೋಣಿ ಸರಸ್ವತಿ ಕಲ್ಯಾಣಮಂಟಪ ರಸ್ತೆಯ ನಿವಾಸಿ ಶಶಿಧರ ಉಪಾಧ್ಯ (42) ತಮ್ಮ ಮಗಳು ಭಾರ್ಗವಿ(8)ಗೆ ನೇಣು ಹಾಕಿ ತಾನೂ ಕೂಡ ನೇಣಿಗೆ ಶರಣಾದವರಾಗಿದ್ದಾರೆ.

ಘಟನೆ ವಿವರ: ವ್ರತಿಯಲ್ಲಿ ಚಾಲಕರಾಗಿರುವ ಶಶಿಧರ ಕಳೆದ 10 ವರ್ಷಗಳ ಹಿಂದೆ ಶೋಭಾ ಎಂಬಾಕೆಯನ್ನು ಮದುವೆಯಾಗಿದ್ದರು. ಅವರಿಗೆ ಭಾರ್ಗವಿ ಎನ್ನುವ ಮಗಳಿದ್ದಳು. ಶಶಿಧರ ಉಪಾಧ್ಯ ಅವರ ಕುಟುಂಬದ ಕಲಹದ ನಡುವೆಯೇ 7 ವರ್ಷಗಳ ಸುಖಸಂಸಾರವನ್ನೇ ಮಾಡಿದ್ದ ಈ ಜೋಡಿ ಕೆಲ ಕಾಲ ಅಲ್ಲಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ಇದ್ದರಂತೆ. ಕಳೆದ 1 ವರ್ಷಗಳ ಹಿಂದಿನಿಂದ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು ಅಂಕದಕಟ್ಟೆಯಲ್ಲಿನ ಬಾಡಿಗೆ ಮನೆಯಿಂದ ಪತ್ನಿ ಹಾಗೂ ಮಗಳು ಭಾರ್ಗವಿಯನ್ನು ಬಿಟ್ಟು ಶಶಿಧರ ಉಪಾಧ್ಯ ತನ್ನ ಮನೆಯಾದ ದೊಡ್ಡೋಣಿ ನಿವಾಸಕ್ಕೆ ಬಂದಿದ್ದರು. ಆ ಬಳಿಕ ತನ ಪಾಡಿಗೆ ತಾನು ಕೆಲಸ ಕಾರ್ಯದಲ್ಲಿದ್ದ ಅವರು ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ ಬಗ್ಗೆ ಮೂಲಗಳ ಮಾಹಿತಿಯಿದೆ. ಆದರೇ  5-6 ತಿಂಗಳ ಹಿಂದೆ ಪತ್ನಿ ಶೋಭಾ ಅವರು ಶಶಿಧರ ಅವರ ಬಳಿ ಮಗಳು ಭಾರ್ಗವಿಯನ್ನು ನೀವೆ ಸಾಕಿ ತನಗೆ ಸಾಕಲು ಆಗುವುದಿಲ ಎಂದಿದ್ದು ಆ ಬಳಿಕ ಶಶಿಧರ್ ಭಾರ್ಗವಿಯನ್ನು ಕರೆತಂದು ಕೋಟೇಶ್ವರ ಶಾಲೆಗೆ ದಾಖಲಿಸಿದ್ದರು. ಕೋಟೇಶ್ವರ ಶಾಲೆಯಲ್ಲಿ ಭಾರ್ಗವಿ 2 ನೇ ತರಗತಿ ಓದುತಿದ್ದಳು. ಶಶಿಧರ್ ಉಪಾಧ್ಯ ಹಾಗೂ ಭಾರ್ಗವಿ ತಮ್ಮ ಮೂಲ ಮನೆ ಸಮೀಪದಲ್ಲಿಯೇ ಇನ್ನೊಂದು ಮನೆಯಲ್ಲಿ ಇಬರೇ ವಾಸಿಸುತ್ತಿದ್ದರು.

suside_koteshwara_father&daughter suside_koteshwara_father&daughter (1) suside_koteshwara_father&daughter (2)

Koteshwara_man suside_with daughter Koteshwara_man suside_with daughter (1) Koteshwara_man suside_with daughter (2) Koteshwara_man suside_with daughter (3) Koteshwara_man suside_with daughter (4) Koteshwara_man suside_with daughter (5) Koteshwara_man suside_with daughter (6) Koteshwara_man suside_with daughter (7) Koteshwara_man suside_with daughter (8) Koteshwara_man suside_with daughter (9) Koteshwara_man suside_with daughter (10) Koteshwara_man suside_with daughter (11)

ಮಲಗಿದ್ದವರು ನೇಣಿಗೆ ಕುಣಿಕೆಗೆ..?: ನಿತ್ಯದಂತೆ ಊಟ ಮಾಡಿ ಮಲಗಿದ್ದ ತಂದೆ ಮಗಳು ಬೆಳಿಗ್ಗೆ ಹೆಣವಾಗಿದ್ದರು. ಪ್ರತೇಕ ಕೋಣೆಯಲ್ಲಿ ತಂದೆ ಮತ್ತು ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಾತ್ರಿ ಮಲಗಲು ಸಿದ್ದಪಡಿಸಿಟ್ಟ ಹಾಸಿಗೆ, ಸೊಳ್ಳೆ ಪರದೆ ಯಥಾಸ್ಥಿತಿಯಲ್ಲಿತ್ತು. ಪಕ್ಕಡಲ್ಲಿ ‘ತಮ್ಮ ಸಾವಿಗೆ ನಾವೇ ಕಾರಣ’ ಎಂಬ ಡೆತ್ ನೋಟ್ ಸಿಕ್ಕಿತ್ತು. ಇದೆಲ್ಲವನ್ನೂ ನೋಡಿದರೇ ರಾತ್ರಿ ಮಲಗಿದ ಬಳಿಕ ಶಶಿಧರ್ ಅವರು ನಿದ್ದೆಯಲ್ಲಿದ್ದ ಭಾರ್ಗವಿಗೆ ಮೊದಲು ನೇಣು ಹಾಕಿ ಬಳಿಕ ಪಕ್ಕದ ಕೊಠಡಿಯಲ್ಲಿ ತಾನೂ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ದಾಂಪತ್ಯ ಕಲಹ ಹಗೂ ಕುಟುಂಬ ಸಮಸ್ಯೆಯೇ ಆತ್ಮಹತ್ಯೆಗೆ ಕಾರನ್ಮವೆನ್ನಲಾಗಿದ್ದು ಬಾಳಿ ಬದುಕಬೇಕಾಗಿದ್ದ ಬಾಲಕಿ ಭಾರ್ಗವಿಯನ್ನು ಸಾಯಿಸಿದ ಬಗ್ಗೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಮೊಮ್ಮಗಳಿಗೆ ಕಾಫಿ ನೀಡಲು ತನ್ನ ಮನೆಯಿಂದ ಇವರ ಮನೆಗೆ ಬಂದ ಶಶಿದರ ಅವರ ತಾಯಿ ಎಷ್ಟೇ ಕೂಗಿದರೂ ಬಾಗಿಲು ತೆರೆಯದಿದ್ದಾಗ ಹಿರಿಯ ಮಗ ವಿಧ್ಯಾದರ ಅವರಿಗೆ ತಿಳಿಸಿದ್ದಾರೆ. ಇಬ್ಬರು ಮನೆಯ ಬಲಭಾಗದ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಹೆಣ ನೋಡಲು ಬಾರದ ಶೋಭಾ: ಗಂಡ ಹಾಗೂ ಮಗಳ ಮ್ರತದೇಹವನ್ನು ಶಶಿಧರ ಅವರ ಪತ್ನಿ ಶೋಭಾ ನೋಡಲು ಬಾರದಿರುವ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಮ್ರತದೇಹವನ್ನು ಕೊಂಡೊಯ್ಯುವಾಗ ಭಾರ್ಗವಿಗೆ ಅಚ್ಚುಮೆಚ್ಚಾಗಿದ್ದ ಮನೆ ಸಮೀಪದ ಬಂಟ್ ಮಹಿಳೆಯೋರ್ವರ ಆಕ್ರಂಧನ ಮುಗಿಲುಮುಟ್ಟಿತ್ತು. ಈ ವೇಳೆ ಸ್ಥಳೀಯರು ಕಣ್ಣೀರು ಹಾಕಿದ್ರು.

ಸದ್ಯ ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಂದಾಪುರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment