ಪ್ರಮುಖ ವರದಿಗಳು

ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ರಸ್ತೆ ಅಪಘಾತದಲ್ಲಿ ಸಾವು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಸಂತಾಪ

Pinterest LinkedIn Tumblr

janaki-raam

ನಲಗೊಂಡ: ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂದ್ರಪ್ರದೇಶದ ನಲಗೊಂಡ ಬಳಿ ತಮ್ಮ ಟಾಟಾ ಸಫಾರಿ ಕಾರಿನಲ್ಲಿ ತೆರಳುತ್ತಿದ್ದಾಗ ಎದುರಿಗೆ ಬರುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದ ಪರಿಣಾಮ ಜನಾಕಿ ಸಾವನ್ನಪ್ಪಿದ್ದಾರೆ.

ಜಾನಕಿ ರಾಮ್ ಅವರು ಸ್ವತಃ ಕಾರು ಚಲಿಸುತ್ತಿದ್ದ ವೇಳೆ ನಲಗೊಂಡದ ಆಕುಪಾಮುಲ ಬಳಿ ಕಾರು ದುರಂತಕ್ಕೀಡಾಗಿದೆ. ಈ ಕುರಿತು ಕೋದಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ನೆಡಿಸಿದರು.

ಎನ್‌ಟಿಆರ್ ಮೊಮ್ಮಗ ಹಾಗೂ ಹರಿಕೃಷ್ಣರ ಮಗ ಜಾನಕಿ ರಾಮ್. ಇವರು ಪತ್ನಿ ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಎನ್‌ಟಿಆರ್ ಆರ್ಟ್ ಚಿತ್ರ ನಿರ್ಮಾಣ ಸಂಸ್ಥೆ ನಡೆಸುತ್ತಿದ್ದು ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಜಾನಕಿರಾಮ್.

ಇವರ ಸಾವಿಗೆ ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಸಂತಾಪ ವ್ಯಕ್ತಪಡಿಸಿದ್ದಾರೆ. ಜಾನಕಿ ರಾಮ್ ಸಾವಿನಿಂದಾಗಿ ಎನ್‌ಟಿಆರ್ ಕುಟುಂಬ ಶೋಕದ ಮಡುವಿನಲ್ಲಿ ಮುಳುಗಿದೆ. ಟಾಲಿವುಡ್ ಚಿತ್ರರಂಗದ ಹಲವು ಗಣ್ಯರು ಜಾನಕಿರಾಮ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

Write A Comment