ಕರ್ನಾಟಕ

ಉಚಿತ ಆರೋಗ್ಯ ತಪಾಸಣಾ ಶಿಬಿರ: ಪತ್ರಕರ್ತರ ಆರೋಗ್ಯ ವಿಮಾ ಸೌಲಭ್ಯಕ್ಕೆ ಸರಕಾರದ ನೆರವು: ಗೃಹ ಸಚಿವ ಕೆ.ಜೆ.ಜಾರ್ಜ್

Pinterest LinkedIn Tumblr

georgeಬೆಂಗಳೂರು, ಡಿ. 7: ಪತ್ರಕರ್ತರಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಅಗತ್ಯ ನೆರವು ನೀಡಲಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸದಾ ಒತ್ತಡದಲ್ಲಿ ಇರುತ್ತಾರೆ. ತಮ್ಮ ಸುದ್ದಿ ಮೊದಲು ಪ್ರಕಟವಾಗಬೇಕೆಂಬ ಪೈಪೊಟಿಯಲ್ಲಿ ತಮ್ಮ ಆರೋಗ್ಯವನ್ನೇ ಮರೆತಿರುತ್ತಾರೆ. ಈ ರೀತಿ ನಿರ್ಲಕ್ಷದಿಂದ ಆರೋಗ್ಯ ಗಂಭೀರ ಸ್ಥ್ಥಿತಿಗೆ ಹೋದಾಗ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದುದರಿಂದ ಖಾಯಿಲೆ ಬರುವ ಮೊದಲೇ ಆರೋಗ್ಯ ತಪಾಸಣೆ ನಡೆಸಿ ಎಚ್ಚೆತ್ತುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಎಚ್ಚರಿಸಿದರು.

ಅನೇಕ ಸರಕಾರಿ ಆರೋಗ್ಯ ವಿಮಾ ಸೌಲಭ್ಯಗಳೂ ಸೇರಿದಂತೆ ಎಲ್ಲ ರೀತಿಯ ವಿಮಾ ಸೌಲಭ್ಯ ಗಳನ್ನು ಪತ್ರಕರ್ತರು ಸದ್ಭಳಕೆ ಮಾಡಿ ಕೊಳ್ಳಬೇಕು. ವಿಮಾ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅದನ್ನು ಬಳಸಿಕೊ ಳ್ಳುವವರ ಪ್ರಮಾಣ ಕಡಿಮೆ ಇದೆ. ಪಾಶ್ಚಾತ್ಯ ದೇಶಗಳಲ್ಲಿ ಆರೋಗ್ಯ ವಿಮಾ ಸೌಲಭ್ಯಗಳನ್ನು ಬಳಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ ಎಂದರು.

ವಿಮಾ ಸೌಲಭ್ಯವಿದ್ದರೆ ಅನಾರೋ ಗ್ಯಕ್ಕೆ ಸಿಲುಕಿದಾಗ ಆರ್ಥಿಕ ಸಂಕಷ್ಟ ಅಷ್ಟಾಗಿ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಪತ್ರಕತರು ಆರೋಗ್ಯ ವಿಮೆ ಮಾಡಿಸಲು ಕ್ರಮ ವಹಿಸಬೇಕೆಂದ ಅವರು, ಪತ್ರಕರ್ತರು ಒತ್ತಡದ ನಡುವೆ ಅನೇಕ ಸಾಮಾಜಿಕ ಕಾರ್ಯ ಗಳನ್ನು ಮಾಡುತ್ತಾರೆ. ಆದರೆ, ಸರಕಾರವನ್ನು ಟೀಕಿಸುವುದೆ ಅವರ ಗುರಿ ಆಗಬಾರದು. ಸರಕಾರದಲ್ಲಿನ ಉತ್ತಮ ಅಧಿಕಾರಿಗಳಿದ್ದಾರೆ.ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಹಾಗೆಯೇ ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕೆ ಮಾಧ್ಯಮಗು ಸಹಕಾರ ನೀಡ ಬೇಕೆಂದರು.

ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಉತ್ತಮ ಅಧಿಕಾರಿಗಳಿದ್ದಾರೆ. ಅವರು ಕೂಡ ಪತ್ರಕರ್ತರಂತೆ ಸಹಾ ಒತ್ತಡ ದಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ತಪಾಸಣೆಗೆ ತಲಾ 1 ಸಾವಿರ ರೂ. ನೀಡಲು ಉದ್ದೇಶಿದ್ದು, ಶೀಘ್ರದಲ್ಲೆ ಈ ಯೋಜನೆ ಜಾರಿಗೆ ತರಲಾಗುವುದು ಎಂದರು.

ಬಿಬಿಎಂಪಿ ಮೇಯರ್ ಶಾಂತ ಕುಮಾರಿ ಮಾತನಾಡಿ, ಆರೋಗ್ಯದ ಮುಂದೆ ಯಾವ ಆಸ್ತಿಯೂ ಇಲ್ಲ. ನಾವು ಆಸ್ತಿಯ ಹಿಂದೆ ಓಡಿದಷ್ಟು ಆರೋಗ್ಯ ಕಳೆದು ಕೊಳ್ಳುವುದು ಖಚಿತ. ಆದುದರಿಂದ ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚು ಒತ್ತು ಕೊಡು ವುದು ಅನಿವಾರ್ಯ ಎಂದು ಹೇಳಿದರು.

ಒತ್ತಡದಲ್ಲಿರುವ ಪತ್ರಕರ್ತರು, ರಾಜಕಾರಣಿಗಳು ಅನಾರೋಗ್ಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಇದರಿಂದ ಪಾರಾಗಲು ಆರೋಗ್ಯ ತಪಾಸಣೆ ಶಿಬಿರಗಳು ಅಗತ್ಯ. ಆರೋಗ್ಯ ವಿಮಾ ಸೌಲಭ್ಯ ಪಡೆಯುವುದು ಅನಿವಾರ್ಯ ಎಂದು ಶಾಂತಕುಮಾರಿ ಇದೇ ವೇಳೆ ಪತ್ರಕರ್ತರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಾಸ್ಮೆಟ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಥಾಮಸ್ ಚಾಂಡಿ, ಉಪಾಧ್ಯಕ್ಷ ಡಾ.ಅಜಿತ್ ಬೆನೆಡಿಕ್ಟ್ ರಾಯನ್, ಡಾ.ಅಗರ್‌ವಾಲ್ ಆಸ್ಪತ್ರೆಯ ಜಿ.ಆರ್.ಸೋಮಯಾಜಿ, ಡಾ.ರಾಹುಲ್ ಜೈನ್, ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಶಿವಕುಮಾರ್ ಬೆಳಿತಟ್ಟೆ ಹಾಜರಿದ್ದರು.

Write A Comment