ಮ್ಯಾಡ್ರಿಡ್: ಪೋರ್ಚುಗಲ್ ಸ್ಟಾರ್ ಆಟಗಾರ ಹಾಗೂ ರಿಯಲ್ ಮ್ಯಾಡ್ರಿಡ್ ಕ್ಲಬ್ ಸ್ಟ್ರೇಕರ್, ಶ್ರೀಮಂತ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಭಿಕ್ಷೆ ಎತ್ತಿದ್ದಾರೆ.
ಹೌದು. ಕೆಲ ದಿನಗಳ ಹಿಂದೆ ಮ್ಯಾಡ್ರಿಡ್‍ನ ರಸ್ತೆಯಲ್ಲಿ ಮಾರುವೇಷ ಧರಿಸಿ ಕೆದರಿದ ಕೂದಲು,ಗಡ್ಡ ಮೀಸೆಯೊಂದಿಗೆ ಭಿಕ್ಷುಕನ ವೇಷ ಧರಿಸಿ ರೊನಾಲ್ಡೋ ಮ್ಯಾಡ್ರಿಡ್‍ನ ಗಲ್ಲಿ ಗಲ್ಲಿಯಲ್ಲಿ ಭಿಕ್ಷೆಯನ್ನು ಬೇಡಿದ್ದಾರೆ. ಉದ್ದ ಕೂದಲಿನ ವಿಗ್, ನಕಲಿ ಗಡ್ಡ ಹಾಗೂ ಬಾಡಿ ಸೂಟ್ ಧರಿಸಿ ಬಿಳಿ ನಾಯಿ ಜೊತೆ ಮ್ಯಾಡ್ರಿಡ್‍ನ ಒಂದು ಬೀದಿಯಲ್ಲಿದ್ದ ಜನರ ಜೊತೆ ಫುಟ್‍ಬಾಲ್ ಆಡಿದ್ದಾರೆ.
ರೋನಾಲ್ಡೋ ಅವರು ತುಂಬಾ ಹೊತ್ತು ಆಡಿದ್ದರೂ ಯಾರಿಗೂ ಇವರ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಬಾಲಕನೊಬ್ಬ ರೋನಾಲ್ಡೋ ಅವರನ್ನು ಪತ್ತೆ ಹಚ್ಚಿದ್ದಾನೆ. ಹೀಗಾಗಿ ಫುಟ್‍ಬಾಲ್ ಆಡಿ ಗುರುತು ಪತ್ತೆ ಹಚ್ಚಿದ ಬಾಲಕನಿಗೆ ರೋನಾಲ್ಡೋ ಹಸ್ತಾಕ್ಷರ ಬರೆದ ಫುಟ್‍ಬಾಲನ್ನು ಉಡುಗೊರೆಯಾಗಿ ನೀಡಿದರು.
ಮಾರುವೇಷ ಧರಿಸಿದ್ದು ಯಾಕೆ?: ರೊನಾಲ್ಡೋ ತಮ್ಮ `ಸಿಆರ್ ಸೆವೆನ್’ ಬ್ರಾಂಡ್ ವಯರ್‍ಲೆಸ್ ಹೆಡ್‍ಫೋನ್ ಪ್ರಚಾರಕ್ಕಾಗಿ ಈ ವೇಷ ಧರಿಸಿ ಬೀದಿಯಲ್ಲಿ ಭಿಕ್ಷೆ ಎತ್ತಿ ಫುಟ್‍ಬಾಲ್ ಆಡಿದ್ದರು.
https://youtu.be/3odyA5fl78Q