ಬಿಲಾಸ್ ಪುರ್: ಶಿಮ್ಲಾದ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದು ಮೂವರು ಕಾರ್ಮಿಕರು ಒಳಗಡೆ ಸಿಲುಕಿದ್ದಾರೆ. ಕಳೆದ 9 ದಿನಗಳ ಹಿಂದೆ ಈ ಅವಘಡ ಸಂಭವಿಸಿತ್ತು.
ಹಿಮಾಚಲ ಪ್ರದೇಶದ ಬಿಲಾಸ್ ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗಮಾರ್ಗ ಕುಸಿದ ಪರಿಣಾಮ ಕಳೆದ 9 ದಿನಗಳಿಂದ ಕಾರ್ಮಿಕರು ಒಳಗಡೆಯೇ ಸಿಲುಕಿದ್ದಾರೆ. ಇವರಲ್ಲಿ ಇನ್ನು ಇಬ್ಬರು ಜೀವತಂವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ರವಾನಿಸಿರುವ ಕ್ಯಾಮೆರಾದಲ್ಲಿ ಇಬ್ಬರ ದೃಶ್ಯ ಸಿಕ್ಕಿದೆ.
ದೃಶ್ಯಗಳಲ್ಲಿ ಇಬ್ಬರು ಕಾರ್ಮಿಕರು ತಮ್ಮ ರಕ್ಷಣೆಗೆ ಬೇಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿದೆ. ಇಬ್ಬರು ಕ್ಯಾಮೆರಾದ ಮುಂದೆ ಮಾತನಾಡಿದ್ದು, ಇನ್ನು ಏಳು ಎಂಟು ದಿನ ಬದುಕಿ ಉಳಿಯುವ ಶಕ್ತಿ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸುವಂತೆ ಅವರು ಮನವಿ ಮಾಡಿದ್ದಾರೆ. ಆದರೆ, ಸುರಂಗದಲ್ಲಿ ಸಿಲುಕಿಕೊಂಡಿರುವ ಮತ್ತೊಬ್ಬನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಬಿಲಾಸ್ ಪುರದಲ್ಲಿ ಸುಮಾರು 1,200 ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಸೆ.12ರಂದು ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. 9 ದಿನಗಳಿಂದ ಸುರಂಗದೊಳಗೆ ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸುರಂಗದೊಳಗಿದ್ದ ಕಾರ್ಮಿಕರಿಗೆ ಆಕ್ಸಿಜನ್, ಗ್ಲುಗೋಸ್, ಅಗತ್ಯವಾದ ಆಹಾರಗಳನ್ನು ಕೊಡಲಾಗುತ್ತಿದೆ.
ಶನಿವಾರ ಇಬ್ಬರು ಕಾರ್ಮಿಕರು ಮಾತನಾಡುತ್ತಿರುವ ದೃಶ್ಯದ ವಿಡಿಯೋ ಲಭ್ಯವಾಗಿದೆ. ಸುರಂಗದೊಳಗೆ ಕ್ಯಾಮರಾ ಮತ್ತು ಮೈಕ್ರೋಫೋನ್ ಇಳಿಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕರಾದ ಸತೀಶ್ ಮತ್ತು ಮಣಿರಾಮ್ ದೃಶ್ಯ ಸೆರೆಯಾಗಿದೆ. ಇಬ್ಬರು ಮೈಕ್ರೋ ಫೋನ್ ಮೂಲಕ ಅಧಿಕಾರಿಗಳ ಜೊತೆ ಮಾತನ್ನಾಡಿದ್ದಾರೆ. ಅದರಲ್ಲಿ 3ನೇ ಕಾರ್ಮಿಕನ ದೃಶ್ಯ ಸೆರೆಯಾಗಿಲ್ಲ.
ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಹಿಮಾಚಲ ಪ್ರದೇಶದ ಹೈಕೋರ್ಟ್ ಈ ಘಟನೆ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಗಡಿ ರಸ್ತೆ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದೆ.
https://youtu.be/2ZjALXnJb3w