ಗಲ್ಫ್

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸೌದಿ ಇಂಜಿನಿಯರ್‌ನೊಬ್ಬ ಭಾರತದ ಕಾರ್ಮಿಕನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ವೀಡಿಯೋ !

Pinterest LinkedIn Tumblr

beat

ಮೆಕ್ಕಾ: ಮಧ್ಯಪ್ರಾಚ್ಯದಲ್ಲಿ ಭಾರತೀಯ ಕಾರ್ಮಿಕರು ಹಲವಾರು ರೀತಿಯಲ್ಲಿ ಹಿಂಸೆಗೊಳಗಾಗುತ್ತಿದ್ದಾರೆ ಎಂಬುದು ನಿಜ ಸಂಗತಿ. ಭಾರತದಿಂದ ಸಾವಿರಾರು ಜನರು ಕೂಲಿ ಕೆಲಸ, ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಸೌದಿ ಅರೇಬಿಯಾಗೆ ಹೋಗುತ್ತಿದ್ದಾರೆ. ಅಲ್ಲಿ ಅವರ ಜೀವನ ಕಷ್ಟಕರವಾಗಿದ್ದರೂ, ಮನೆಯಲ್ಲಿನ ಬಡತನ ನೀಗಿಸಲು ಎಲ್ಲ ಕಷ್ಟಗಳನ್ನು ಅವರು ಸಹಿಸುತ್ತಿರುತ್ತಾರೆ.

ಮೆಕ್ಕಾದಲ್ಲಿ ಸೌದಿ ಇಂಜಿನಿಯರ್‌ನೊಬ್ಬ ಭಾರತದ ಕಾರ್ಮಿಕನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ವೀಡಿಯೋ ನಿನ್ನೆ ಫೇಸ್‌ಬುಕ್‌ನಲ್ಲಿ ಹರಿದಾಡಿತ್ತು.

ಕಾರ್ಮಿಕ ಕ್ಷಮೆಯಾಚಿಸುತ್ತಿದ್ದರೂ ರಾಕ್ಷಸನಂತೆ ಥಳಿಸುತ್ತಿರುವ ಸೌದಿ ಇಂಜಿನಿಯರ್. ಎರಡು ನಿಮಿಷ ಅವಧಿಯಿರುವ ಈ ವಿಡಿಯೋದಲ್ಲಿ ಇಂಜಿನಿಯರ್ ಯಾವುದೇ ದಯೆ ದಾಕ್ಷಿಣ್ಯವಿಲ್ಲದೆ ಕಾರ್ಮಿಕನಿಗೆ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಕೆನಡಾದ ಪತ್ರಕರ್ತ ತರೇಖ್ ಫತಾಹ್ ಫೇಸ್‌ಬುಕ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಸುದ್ದಿಮೂಲಗಳ ಪ್ರಕಾರ ಈ ವೀಡಿಯೋ ಈಗ ಸೌದಿ ಅರೇಬಿಯಾದಲ್ಲೂ ಚರ್ಚಾ ವಿಷಯವಾಗಿದೆ.

https://youtu.be/-l3OR2uRQtM

1 Comment

Write A Comment