ಅಂತರಾಷ್ಟ್ರೀಯ

ಬೈಕ್ ಕರ್ಕಶ ಶಬ್ಧದಿಂದ ಕಿರಿಕಿರಿಯಾಗಿ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಆನೆಗಳ ಹಿಂಡು ! ಮುಂದೇನಾಯಿತು ? ಈ ವಿಡಿಯೋ ನೋಡಿ

Pinterest LinkedIn Tumblr

elephant

ಕೋರಟ್: ಆನೆಗಳ ದಾಳಿಗೆ ಎಷ್ಟೋ ಜನ ಪ್ರಾಣ ಬಿಟ್ಟಿದ್ದಾರೆ. ಆನೆಗಳು ಕೆಲವೊಮ್ಮೆ ಮದವೇರಿ ದಾಳಿ ಮಾಡುತ್ತವೆ. ಆದರೆ ಥೈಲ್ಯಾಂಡ್‍ನಲ್ಲಿ ಮಾತ್ರ ಆನೆಗಳು ಬೈಕ್ ಕರ್ಕಶ ಶಬ್ಧದಿಂದ ಕಿರಿಕಿರಿಯಾಗಿ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿವೆ.

ಹೌದು. ಇಂತಹದೊಂದು ಘಟನೆ ಥೈಲ್ಯಾಂಡ್‍ನ ಕೋ ಯೈ ನ್ಯಾಷನಲ್ ಪಾರ್ಕ್ ಹೊಂದಿಕೊಂಡಿರುವ ರಸ್ತೆಯಲ್ಲಿ ನಡೆದಿದೆ. ತೀರ ಶಬ್ಧಮಾಡಿಕೊಂಡು ಮೋಟರ್ ಬೈಕ್‍ನಲ್ಲಿ ಬರುತ್ತಿದ್ದ ಸವಾರನ ಮೇಲೆ ಸಿಟ್ಟೆಗೆದ್ದ ಆನೆಗಳ ತಂಡ ಆತನ ಮೇಲೆ ದಾಳಿಗೆ ಮುಂದಾಗಿವೆ. ಆದರೆ ಅದೃಷ್ಟವಶಾತ್ ಆತನಿಗೆ ಆನೆಗಳು ಯಾವುದೇ ತೊಂದರೆ ಮಾಡಿಲ್ಲ.

ಆನೆಗಳು ಆತನ ಬಳಿ ಬರುತ್ತಿದ್ದಂತೆಯೇ ಹೆದರಿದ ಆತ ತಕ್ಷಣ ಬೈಕ್ ಬಿಟ್ಟು ರಸ್ತೆ ಬದಿಗೆ ಹೋಗಿ ನಿಂತಿದ್ದಾನೆ. ಬೈಕ್ ಶಬ್ಧಕ್ಕೆ ಸಿಟ್ಟಿಗೆದ್ದಿದ್ದ ಆನೆಗಳು ಬೈಕ್‍ನ ಮೇಲೆ ತಮ್ಮ ಸಿಟ್ಟನ್ನು ತೋರಿಸಿವೆ. ಆದರೆ ಆನೆಗಳ ಹಿಂಡು ಒಂದರ ಹಿಂದೆ ಒಂದರಂತೆ ಬಂದು ಆತನ ಮುಂದೆ ನಿಂತಿದ್ದು ಮಾತ್ರ ಎಂತವರನ್ನು ಭಯಗೊಳಿಸುತ್ತದೆ. ಇದಕ್ಕೆ ಹೆದರಿದ ಸವಾರ ಏನೂ ತೋಚದೇ ಆನೆಗಳ ಮುಂದೆ ಕೈ ಮುಗಿದು ನಿಂತಿದ್ದಾನೆ. ನಂತರ ಆನೆಗಳು ಅಲ್ಲಿಂದ ನಿರ್ಗಮಿಸಿವೆ. ಈ ಎಲ್ಲಾ ದೃಶ್ಯಗಳು ಪ್ರವಾಸಿಯೊಬ್ಬರ ಕಾರಿನ ಡ್ಯಾಶ್‍ಬೋರ್ಡ್‍ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

https://youtu.be/q5gi2tOJYlo

Write A Comment