ಅಂತರಾಷ್ಟ್ರೀಯ

ಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ್ರು…ಈ ವಿಡಿಯೋ ನೋಡಿ..

Pinterest LinkedIn Tumblr

refugee-baby-saved

ಅಂಕಾರಾ: ಐಸಿಸ್ ಉಗ್ರರಿಂದ ಪಾರಾಗುವ ಸಮುಯದಿಂದ ತಂದೆಯಿಂದ ಕೈಯಿಂದ ಜಾರಿ ಬಿದ್ದ ಸಿರಿಯಾದ ಅಯ್ಲಾನ್ ಕುರ್ಡಿ ಮೃತ ದೇಹ ಸಮುದ್ರ ದಂಡೆಯಲ್ಲಿ ಪತ್ತೆಯಾದ ಫೋಟೋ ವಿಶ್ವದಲ್ಲೇ ಸಂಚಲನ ಉಂಟು ಮಾಡಿತ್ತು. ಈಗ ಅಂತಹದ್ದೆ ಒಂದು ಘಟನೆ ನಡೆದಿದ್ದು, ಸಂತೋಷದ ವಿಚಾರ ಏನೆಂದರೆ ಮಗು ಬದುಕಿದೆ.

ಐಸಿಸ್ ಉಗ್ರರಿಂದ ಪಾರಾಗುವ ನಿಟ್ಟಿನಲ್ಲಿ ಸಿರಿಯಾದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಿಕ್ಕಿ ಸಿಕ್ಕಿದ ಹಡಗುಗಳನ್ನು ಏರಿ ಯುರೋಪ್ ಮತ್ತಿತ್ತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ವೇಳೆ ಪೋಷಕರ ಕೈಯಿಂದ ಜಾರಿ ಬಿದ್ದ 18 ತಿಂಗಳ ಮಗುವೊಂದು ಸಮುದ್ರದಲ್ಲಿ ತೇಲುತ್ತಾ ಬಂದಿದೆ.

ಸಮುದ್ರದಲ್ಲಿ ದೂರದಲ್ಲಿ ಏನೋ ಒಂದು ವಸ್ತು ಕಾಣಿಸುತ್ತಿರುವುದನ್ನು ನೋಡಿದ ಟರ್ಕಿಯ ಮೀನುಗಾರರು ಹತ್ತಿರ ಬಂದಾಗ ಗಂಡು ಮಗುವನ್ನು ನೋಡಿದ್ದಾರೆ. ಕೂಡಲೇ ಅವರಲ್ಲೊಬ್ಬ ಮೀನುಗಾರ ಸಮುದ್ರಕ್ಕೆ ಜಿಗಿದು ಮಗುವನ್ನು ರಕ್ಷಿಸಿದ್ದಾನೆ. ತಂದೆ ತಾಯಿ ಪ್ರಯಾಣದ ವೇಳೆ ಲೈಫ್ ಜಾಕೆಟ್ ತೊಡಿಸಿದ್ದ ಕಾರಣ ಮಗು ಪಾರಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯವಾಗಿದೆ. ಇದೀಗ ಗಂಡುಮಗುವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಮಗು ಮರಳಿ ಸಿಕ್ಕಿದನ್ನು ನೋಡಿ ತಾಯಿ ಸಂತೋಷದ ಕಣ್ಣೀರು ಹಾಕಿದ್ದಾರೆ.

https://youtu.be/TJDMVMRdKnY

Write A Comment