ರಾಷ್ಟ್ರೀಯ

ಭಿಕ್ಷೆ ಬೇಡಿದ ಬಾಲಕನಿಗೆ ಕಾಲಿನಿಂದ ಒದ್ದ ಮಧ್ಯ ಪ್ರದೇಶದ ಸಚಿವೆ ಕುಸುಮ್ ಮೆಹೆದೆಲೆ; ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ ವಿಡಿಯೋ

Pinterest LinkedIn Tumblr

kusum-mehdele

ಭೋಪಾಲ್: ಮಧ್ಯ ಪ್ರದೇಶದ ಸಚಿವೆ ಕುಸುಮ್ ಮೆಹೆದೆಲೆ ಭಿಕ್ಷೆ ಬೇಡುತ್ತಿದ್ದ ಬಾಲಕನೊಬ್ಬನಿಗೆ ಕಾಲಿನಿಂದ ಒದ್ದಿರುವ ಘಟನೆ ಭಾನುವಾರ ನಡೆದಿದೆ.

ಮಧ್ಯ ಪ್ರದೇಶದ ಹಿರಿಯ ಸಚಿವೆ ಕುಸುಮ್ ಮೆಹೆಂದಲೆ ತನ್ನ ಕಾರನ್ನು ಹತ್ತುವಾಗ ಬಾಲಕನು ಅವರ ಕಾಲಿಗೆ ಅಡ್ಡಬಿದ್ದು ರು.1 ಭಿಕ್ಷೆ ಕೇಳಿದ್ದಾನೆ. ಆಗ ಸಚಿವೆ ಆತನನ್ನು ಕಾಲಿನಿಂದ ಒದ್ದು, ತನ್ನ ಕಾರಿನಲ್ಲಿ ಕುಳಿತುಕೊಂಡು ಹೋಗಿದ್ದಾರೆ. ಭದ್ರತಾ ಸಿಬ್ಬಂದಿ ಬಾಲಕನನ್ನು ಎಬ್ಬಿಸಿ ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

ಈ ಸಂಬಂಧ ವೀಡಿಯೊವೊಂದು ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಚಿವೆಯ ಈ ವರ್ತನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಮಧ್ಯ ಪ್ರದೇಶ ಸರ್ಕಾರದ ಕಾನೂನು ಮತ್ತು ಶಾಸಕಾಂಗ ವ್ಯವಹಾರ, ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್, ಪಶು ಸಂಗೋಪನೆ ಮತ್ತು ಇನ್ನೂ ಕೆಲವು ಇಲಾಖೆಗಳ ಸಚಿವ ಸ್ಥಾನವನ್ನು ಮೆಹೆಂದೆಲೆ ನಿರ್ವಹಿಸುತ್ತಿದ್ದಾರೆ. ಅವರು ತನ್ನ ತವರು ಜಿಲ್ಲೆ ಪನ್ನಾದಲ್ಲಿ ನಿನ್ನೆ ನಡೆದ ರಾಜ್ಯ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

Write A Comment