ಅಂತರಾಷ್ಟ್ರೀಯ

ಈಜಿಪ್ಟ್ ನಲ್ಲಿ ರಷ್ಯಾ ವಿಮಾನವನ್ನು ಐಸಿಸ್ ಉಗ್ರರು ಹೊಡೆದುರುಳಿಸುವ ವಿಡಿಯೋ ಬಹಿರಂಗ

Pinterest LinkedIn Tumblr

shooting-russian-plane-ISis

ಕೈರೋ: ಕಳೆದ ವಾರ ಈಜಿಪ್ಟ್‍ನಲ್ಲಿ ಅಪಘಾತವಾದ ರಷ್ಯಾದ ವಿಮಾನವನ್ನ ಹೊಡೆದುರುಳಿಸಿದ್ದು ನಾವೇ ಎಂದು ಐಸೀಸ್ ಉಗ್ರರು ಹೇಳಿಕೊಂಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಐಸಿಸ್ ಉಗ್ರರು ವಿಮಾನವನ್ನು ಹೊಡೆದುರುಳಿಸುವ ವಿಡಿಯೋವೊಂದನ್ನು ಅಪ್‍ಲೋಡ್ ಮಾಡಲಾಗಿದೆ.

ಈ ದೃಶ್ಯದಲ್ಲಿ ವಿಮಾನವನ್ನ ಶೂಟ್ ಮಾಡಿ ಹೊಡೆದುರುಳಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ. 224 ಪ್ರಯಾಣಿಕರನ್ನು ಬಲಿತೆಗೆದುಕೊಂಡ ಈ ವಿಮಾನ ಅಪಘಾತ ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಶನಿವಾರ ಈಜಿಪ್ಟ್‌ನಿಂದ ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್‌ಗೆ ತೆರಳಲು ಎ-321 ಏರ್ ಬಸ್ ವಿಮಾನ ಟೇಕಾಫ್ ಆಗಿತ್ತು. ಟೇಕಾಫ್ ಆದ 20 ನಿಮಿಷಗಳಲ್ಲಿಯೇ ವಿಮಾನ ರಡಾರ್ ಸಂಪರ್ಕ ಕಡಿದುಕೊಂಡು ನಂತರ ಅದು ಈಜಿಪ್ಟ್‌ನ ಸಿನಾಯ್ ಪ್ರದೇಶದಲ್ಲಿ ಪತನವಾಗೊಂಡಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿ 224 ಮಂದಿ ಪ್ರಯಾಣಿಕರಿದ್ದರು. ಪತನಗೊಂಡಾಗ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ ಎಂದು ರಷ್ಯನ್ ಅಧಿಕಾರಿಗಳು ಪ್ರಾಥಮಿಕ ತನಿಖೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದರು.

https://youtu.be/BcPZvd1u4LY

Write A Comment