ಅಂತರಾಷ್ಟ್ರೀಯ

ಭಾರತದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತೀ ಎತ್ತರದ ರೈಲ್ವೆ ಬ್ರಿಜ್

Pinterest LinkedIn Tumblr

22

ಜಗತ್ತಿನ ಅತೀ ಎತ್ತರದ ರೈಲ್ವೇ ಸೇತುವೆ ಭಾರತದಲ್ಲಿ ನಿರ್ಮಾಣಗೊಳ್ಳುತ್ತಿದೆ. ಜಮ್ಮು-ಕಾಶ್ಮೀರದ ಉತ್ತರ ಭಾಗದಲ್ಲಿರುವ ಚೆನಾಬ್​ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಈ ರೈಲ್ವೇ ಸೇತುವೆಯ ಕಾಮಗಾರಿ 2016ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ 359 ಮೀಟರ್​ ಎತ್ತರವಿರಲಿದೆ ಎನ್ನಲಾಗಿದೆ.

ಚೀನಾದಕ್ಕಿಂತಲೂ ಎತ್ತರದ್ದು…
ಈಗ ಇರುವ ಅತೀ ಎತ್ತರದ ರೈಲ್ವೇ ಬ್ರಿಡ್ಜ್​ ಎಂದರೆ ಚೀನಾದ ಬೈಪಾಂಜಿಯಾಂಗ್​ ನದಿಗೆ ಕಟ್ಟಲಾದ ರೈಲ್ವೇಸೇತುವೆ. ಇದು 275 ಮೀಟರ್’​ನಷ್ಟು ಎತ್ತರವಾಗಿದೆ. ಇದಕ್ಕಿಂತಲೂ ಸುಮಾರು 84 ಅಡಿಗಳಷ್ಟು ಎತ್ತರವಾಗಲಿದೆ ಭಾರತದ ಹೊಸ ರೈಲ್ವೇ ಸೇತುವೆ.

ಎತ್ತರ ಹೋಲಿಕೆ ಮಾಡುವುದಿದ್ದರೆ, ಈ ಚೆನಾಬ್​ ನದಿಯ ರೈಲ್ವೇ ಸೇತುವೆ ಪ್ಯಾರಿಸ್’​ನ ಐಫೆಲ್​ ಟವರ್’​ಗಿಂತಲೂ 35 ಅಡಿಗಳಷ್ಟು ಎತ್ತರವಾಗಲಿದೆ.

2002ರಲ್ಲೇ ಆರಂಭವಾಗಿತ್ತು..
ಸುಮಾರು 1,315 ಮೀಟರ್​ ಉದ್ದದ ಈ ಸೇತುವೆಯ ನಿರ್ಮಾಣ ಕಾರ್ಯ 2002ರಲ್ಲೇ ಆರಂಭಗೊಂಡಿತ್ತು. 25 ಸಾವಿರ ಟನ್​’ಗೂ ಹೆಚ್ಚು ಉಕ್ಕು ಹಾಗೂ ಇತರೆ ಸಾಮಾಗ್ರಿಗಳನ್ನು ಬಳಸಿ ಈ ಹೆಮ್ಮೆಯ ಕಾಮಗಾರಿ ಮುಂದುವರೆದಿದೆ. ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದ ಅಗತ್ಯ ಸಾಮಗ್ರಿ ಸಾಗಣೆಗೆ ಸೇತುವೆವರೆಗೂ ರಸ್ತೆಗಳನ್ನೂ ನಿರ್ಮಿಸಲಾಗುತ್ತಿದೆ. ಪ್ರತಿಕೂಲ ಹವಾಮಾನ ಇರುವುದರಿಂದ ಹೆಲಿಕಾಪ್ಟರ್’ಗಳ ನೆರವನ್ನೂ​ ಬಳಸಲಾಗುತ್ತಿದೆ.

ಅಸಾಮಾನ್ಯ ಸೇತುವೆ…
ಹಲವು ರೀತಿಯ ಸವಾಲುಗಳ ನಡುವೆಯೂ ಎಂಜಿನಿಯರ್’ಗಳು ಹಾಗೂ ಕಾರ್ಮಿಕರು ಧೃತಿಗೆಡದೇ ಅದ್ಭುತ ಸೇತುವೆಯ ನಿರ್ಮಾಣದಲ್ಲಿ ತೊಡಗಿರುವುದು ನಿಜಕ್ಕೂ ನಮಗೆಲ್ಲಾ ಹೆಮ್ಮೆಯೇ. ಚಂಡಮಾರುತ, ಭೂಕಂಪ ಮೊದಲಾದ ನೈಸರ್ಗಿಕ ವಿಕೋಪಗಳನ್ನ ಸಹಿಸಿಕೊಳ್ಳುವಷ್ಟು ಶಕ್ತವಾಗಿರಲಿದೆ ಈ ಮಹಾ ಸೇತುವೆ.

ಪ್ರಮುಖ ಕೊಂಡಿ…
ಕೊಂಕಣ ರೈಲ್ವೆ ನಿರ್ವಹಿಸುತ್ತಿರುವ ಈ ನಿರ್ಮಾಣ ಕಾರ್ಯದ ಯೋಜನೆಯ ವೆಚ್ಚ ಸುಮಾರು 500 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಈ ಬ್ರಿಜ್ ನಿರ್ಮಾಣ ಮುಗಿದ ಬಳಿಕ ಬಾರಾಮುಲ್ಲಾ ಮತ್ತು ಜಮ್ಮು ನಡುವೆ ಒಂದು ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ಸದ್ಯಕ್ಕೆ ಈ ಎರಡು ಪಟ್ಟಣಗಳ ನಡುವೆ ಸಂಚರಿಸಲು ಬರೋಬ್ಬರಿ 14 ಗಂಟೆ ತಗಲುತ್ತದೆ. ಈ ಹೊಸ ಸೇತುವೆಯಿಂದ ಪ್ರಯಾಣ ಅವಧಿ 6.5 ಕಿಮೀಗೆ ಇಳಿಯಲಿದೆ.

Write A Comment