https://youtu.be/qtUaiqDfZSI
ಲಂಡನ್: ಮೊಟ್ಟೆಯೊಳಗೆ ಕೆಲವೊಮ್ಮೆ ಎರಡೆರೆಡು ಹಳದಿ ಭಾಗಗಳು ಸಿಗುವುದು ಸಾಮಾನ್ಯ. ಆದ್ರೆ ಯಾವತ್ತದ್ರೂ ಸಿಪ್ಪೆ ಸಮೇತ ಇನ್ನೊಂದು ಮೊಟ್ಟೆ ಇರುವುದನ್ನು ನೋಡಿದ್ದೀರಾ? ಇಂತಹದೊಂದು ಅಪರೂಪದ ಕೋಳಿ ಮೊಟ್ಟೆ ಲಂಡನ್‍ನಲ್ಲಿ ಸಿಕ್ಕಿದೆ.
ಹೌದು. ಇಂಗ್ಲೆಂಡ್‍ನ ಯಾರ್ಕ್‍ಶಿರ್ ನಗರದಲ್ಲಿ ಇಂತಹ ಅಪರೂಪದ ಮೊಟ್ಟೆಯೊಂದು ಕೋಳಿ ಸಾಕಾಣೆಮಾಡುವ ವ್ಯಕ್ತಿಗೆ ಸಿಕ್ಕಿದೆ. ಆಮ್ಲೆಟ್ ಮಾಡಲೆಂದು ಮೊಟ್ಟೆ ಒಡೆದಾಗ ಅದರೊಳಗೆ ಇನ್ನೊಂದು ಮೊಟ್ಟೆ ಇರುವುದು ತಿಳಿದುಬಂದಿದೆ. ಸಾಮಾನ್ಯವಾಗಿ ಒಂದು ಮೊಟ್ಟೆಯಲ್ಲಿ 2 ಹಳದಿ ಭಾಗ ಸಿಗುತ್ತದೆ. ಆದ್ರೆ ಈ ಮೊಟ್ಟೆಯಲ್ಲಿ ಸಿಪ್ಪೆ ಸಮೇತ ಇನ್ನೊಂದು ಮೊಟ್ಟೆ ಪತ್ತೆಯಾಗಿರುವುದು ಆಶ್ಚರ್ಯ ಮೂಡಿಸಿದೆ.
ಆದರೆ ಮೊದಲ ಮೊಟ್ಟೆಗಿಂತ ಅದರೊಳಗೆ ಸಿಕ್ಕಿದ ಮೊಟ್ಟೆಯ ಗಾತ್ರ ಚಿಕ್ಕದಾಗಿದೆ. ಅಲ್ಲದೇ ಮಾಮೂಲಿಯಾಗಿ ಮೊಟ್ಟೆಯ ಸಿಪ್ಪೆಯ ಬಣ್ಣ ಬಿಳಿಯಾಗಿರುತ್ತದೆ ಆದರೆ ಈ ಮೊಟ್ಟೆ ಸಿಪ್ಪೆಯು ಬೂದು ಬಣ್ಣದಲ್ಲಿದ್ದಿದ್ದು ವಿಶೇಷ. ಮೊದಲು ಮೊಟ್ಟೆಯೊಡೆದ ಮಾಲೀಕನಿಗೆ ಅದರೊಳಗೆ ಇನ್ನೊಂದು ಮೊಟ್ಟೆಯಿರುವುದು ಗೊತ್ತಾಗಿ ಎರಡನೇ ಮೊಟ್ಟೆ ಒಡೆಯು ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.