ಅಂತರಾಷ್ಟ್ರೀಯ

ನೀವು ರೋಬೋಟ್ ಮನೆ ನೋಡಿದ್ರಾ…! ಕೆಲವೇ ನಿಮಿಷದಲ್ಲಿ ಮನೆ ನಿಮ್ಮ ಕಣ್ಣ ಮುಂದೆ…! ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/aNfwNDEeDSg

ಲಂಡನ್: ಭವಿಷ್ಯದಲ್ಲಿ ಎಲ್ಲವೂ ರೋಬೋಟ್ ಮಯವಾಗಿರುತ್ತೆ ಎನ್ನುವ ಮಾತು ಈಗಾಗಲೇ ತಂತ್ರಜ್ಞಾನದ ಬೆಳವಣಿಗೆ ಮೂಲಕ ಸಾಬೀತಾಗುತ್ತಲೇ ಇದೆ. ಇದೀಗ ರೋಬೋಟಿಕ್ ಮನೆ ನಿರ್ಮಾಣವಾಗುತ್ತಿದ್ದು, ಟ್ರಕ್‍ನ ಮೂಲಕ ಈ ಮನೆಯನ್ನು ಎಲ್ಲಿಬೇಕಂದರಲ್ಲಿ ಅನಾವರಣಗೊಳಿಸಬಹುದು.

ರಷ್ಯಾದ ವಿನ್ಯಾಸಕ ಸೆಮೈನೌ ದಹಿರ್ ಭವಿಷ್ಯದ ರೋಬೋಟಿಕ್ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಭವಿಷ್ಯದ ರೋಬೋಟಿಕ್ ಮನೆ ಲಾರಿಯ ಹಿಂದಿನ ಭಾಗದಲ್ಲಿ ನಿರ್ಮಾಣವಾಗಲಿದೆ. ಅಲ್ಲದೇ ಈ ಮನೆ ನಿಮಿಷಗಳಲ್ಲಿ ನಿರ್ಮಾಣವಾಗುತ್ತದೆ. ಈ ಅಪರೂಪದ ರೋಬೋ ಹೌಸ್ ಲಂಡನ್‍ನಲ್ಲಿ ನಿರ್ಮಾಣ ಮಾಡಲು ಬರೋಬ್ಬರಿ 360000 ಪೌಂಡ್( ಅಂದಾಜು 3.39 ಕೋಟಿ ರೂ.) ವೆಚ್ಚವಾಗುತ್ತದೆ.

ಟ್ರಕ್‍ನಂತೆ ಭಾಸವಾಗುವ ಈ ಮನೆ ಕ್ಷಣಾರ್ಧದಲ್ಲಿ ತೆರೆದುಕೊಂಡು, ಅದರೊಳಗೆ ಕೊಠಡಿ ಹಾಲ್ ಎಲ್ಲವೂ ಒಂದೊಂದಾಗಿ ತೆರೆದುಕೊಳ್ಳುತ್ತ ಮನೆಯಾಗಿ ನಿರ್ಮಾಣವಾಗುತ್ತದೆ. ಕೆಳಭಾಗದಲ್ಲಿ ಈ ಟ್ರಕ್‍ಗೆ ಚಕ್ರಗಳನ್ನು ಅಳವಡಿಸಲಾಗಿರುವುದರಿಂದ ಎಲ್ಲಿಂದರಲ್ಲಿ ಸ್ಥಳಾಂತರಿಸಬಹುದಾಗಿದೆ. ಜೊತೆಗೆ ಈ ಮನೆಯೊಳಗೆ ಜನರೇಟರ್, ವಾಟರ್ ಟ್ಯಾಂಕ್ ಹಾಗೂ ಗ್ಯಾಸ್ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ.

Write A Comment