https://youtu.be/XTVwGimksBI
ಸಿಯೋಲ್: ತಾಯಿ ಸಾಯುವ ಕ್ಷಣದಲ್ಲೂ ಮಕ್ಕಳ ಬಗ್ಗೆ ಯೋಚನೆ ಮಾಡ್ತಾಳೆ. ಇದಕ್ಕೆ ಸಾಕ್ಷಿ ಎಂಬಂತೆ ತಾಯಿ ಒಬ್ಬಳು ಕಟ್ಟಡಕ್ಕೆ ಬೆಂಕಿ ಬಿದ್ದು ಸಾವಿನ ಅಂಚಿನಲ್ಲಿದ್ದ ಮಕ್ಕಳನ್ನು ತಪ್ಪಿಸಿದ್ದಲ್ಲದೇ ತಾನು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಹೌದು. ದಕ್ಷಿಣ ಕೊರಿಯಾದಲ್ಲಿ ಕಟ್ಟಡವೊಂದಕ್ಕೆ ಬೆಂಕಿಹೊತ್ತಿಕೊಂಡಿತ್ತು. ಈ ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ತಾಯಿ ಹಾಗೂ ಮೂರು ಮಕ್ಕಳು ಇನ್ನೇನು ತಮ್ಮ ಜೀವ ಕಳೆದುಕೊಳ್ಳುವ ಹಂತ ತಲುಪಿದ್ರು. ಆದರೆ ಸೇನಾ ಪಡೆಯ ಸಹಾಯ ಪಡೆದ ತಾಯಿ ಮೂರು ಮಕ್ಕಳನ್ನು 4ನೇ ಮಹಡಿಯಿಂದ ಕೆಳಗೆಸೆದು ತಾನು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾಳೆ.
ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ ಮಕ್ಕಳೊಂದಿಗಿದ್ದ ತಾಯಿಗೆ ಏನು ತೋಚದೇ ಹೋಗಿದೆ. ಮೊದಲಿಗೆ ತಾಯಿ ಮಕ್ಕಳನ್ನು ಹಾಕಲು ಹಿಂಜರಿದಿದ್ದಾಳೆ. ಆದರೆ ನಂತರ ತನ್ನ 4 ಹಾಗೂ 3 ವರ್ಷದ ಜೊತೆಗೆ 7 ತಿಂಗಳ ಮಗುವನ್ನ ಕೆಳಗೆ ಎಸೆದಿದ್ದಾಳೆ. ನಂತರ ತಾನು ಹಾರಿದ್ದಾಳೆ. ಈ ನಾಲ್ವರನ್ನು ರಕ್ಷಿಸಿದ ನಂತರ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.